ಹೊಸದಿಗಂತ ಡಿಜಿಟಲ್ ಡೆಸ್ಕ್:
2011ರಲ್ಲಿ ಬಾಲಿವುಡ್ ಪ್ರವೇಶಿಸಿದ ಪ್ರಿಯಾಂಕಾ ಚೋಪ್ರಾ ಅವರ ಸಂಬಂಧಿ ಪರಿಣಿತಿ ಚೋಪ್ರಾ ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ಹೀರೋಯಿನ್ ಅಲ್ಲದಿದ್ದರೂ, ಪರಿಣಿತಿ ಚೋಪ್ರಾಗೆ ಬಾಲಿವುಡ್‌ನಲ್ಲಿ ಸಾಧಾರಣ ಫಾಲೋಯಿಂಗ್ ಇದೆ. ಯಾವಾಗಲೂ ಒಂದೋ ಎರಡೋ ಪ್ರಾಜೆಕ್ಟ್ ಕೈಯಲ್ಲಿರುತ್ತದೆ. ಬಾಲಿವುಡ್‌ನಲ್ಲಿ ಪ್ರೇಮ ಪ್ರಕರಣಗಳು ಮತ್ತು ಡೇಟಿಂಗ್ ವದಂತಿಗಳು ತುಂಬಾ ಸಾಮಾನ್ಯವಾಗಿದೆ. ಮುಂಬೈನಲ್ಲಿ ಬಾಲಿವುಡ್ ಹೀರೋಗಳು ಮತ್ತು ಹೀರೋಯಿನ್‌ಗಳು ಒಟ್ಟಿಗೆ ನಡೆಯುತ್ತಿರುವುದು ಕಂಡು ಬರುತ್ತಿದೆ. ಇತ್ತೀಚೆಗಷ್ಟೇ ಪರಿಣಿತಿ ಚೋಪ್ರಾ ರಾಜಕಾರಣಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದೆ.
ಪರಿಣಿತಿ ಚೋಪ್ರಾ, ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ನಲ್ಲಿ ವರದಿಯಾಗಿದೆ. ಇತ್ತೀಚೆಗೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಮುಂಬೈನ ರೆಸ್ಟೋರೆಂಟ್‌ಗಳಿಗೆ ಹೋಗುವಾಗ ಮಾಧ್ಯಮಗಳಿಗೆ ಸಿಕ್ಕಿಬಿದ್ದಿದ್ದರು. ಲಂಚ್, ಡಿನ್ನರ್‌ಗೆ ತೆರಳುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು, ಫೋಟೋಗಳು ವೈರಲ್ ಆಗಿವೆ. ರಾಘವ್ ಮತ್ತು ಪರಿಣಿತಿ ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾತ್ರಿ ಡಿನ್ನರ್ ಮಾಡಿ ಅಲ್ಲಿ ಮಾಧ್ಯಮಗಳಿಗೆ ಪೋಸ್ ನೀಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಇವರಿಬ್ಬರು ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆಯೇ? ಅಥವಾ ಯಾವುದಾದರೂ ಕೆಲಸದ ಮೇಲೆ ಭೇಟಿ ಮಾಡಿದ್ದಾರಾ? ಎಂಬ ಅನುಮಾನ ಮೂಡಿದೆ.
ರಾಘವ್ ಚಡ್ಡಾ ಪ್ರಸ್ತುತ ರಾಜ್ಯಸಭಾ ಸಂಸದ ಮತ್ತು ಗುಜರಾತ್ ಎಎಪಿಯ ಸಹ-ಪ್ರಭಾರಿಯಾಗಿದ್ದಾರೆ. ಪರಿಣಿತಿ ಸದ್ಯ ಎರಡು ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ಇಬ್ಬರು ಏಕೆ ಭೇಟಿಯಾದರು? ಎಂಬುದು ಇದೀಗ ಎದ್ದಿರುವ ಪ್ರಶ್ನೆ. ಆದರೆ ಇದಕ್ಕೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.