ಬಾಲಿವುಡ್ ಮೆಗಾ ಪ್ರಾಜೆಕ್ಟ್: ‘ರಾಮಾಯಣ’ದಲ್ಲಿ ಯಾರು ಯಾವ ಪಾತ್ರ ಮಾಡ್ತಿದ್ದಾರೆ? ಇಲ್ಲಿದೆ ಫುಲ್ ಡೀಟೇಲ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರ್ದೇಶಕ ನಿತೇಶ್ ತಿವಾರಿ ಅವರ ಬಹು ನಿರೀಕ್ಷಿತ ಚಿತ್ರ ‘ರಾಮಾಯಣ’ ಘೋಷಣೆಯಾಗುತ್ತಿದ್ದಂತೆ ಭಾರತೀಯ ಚಿತ್ರರಸಿಕರ ಗಮನ ಸೆಳೆದಿದೆ. ಪೌರಾಣಿಕ ಮಹಾಕಾವ್ಯವನ್ನು ಆಧಾರಿತವಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ.

ಭಾರತದ ಇತಿಹಾಸದಲ್ಲಿಯೇ ಇದನ್ನು ಅತ್ಯಂತ ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಅದ್ಭುತ ದೃಶ್ಯ ಹಾಗೂ ಹಲವಾರು ನಟ ನಟಿಯರ ಸಮ್ಮಿಲನ ಈ ಚಿತ್ರವನ್ನು ವಿಶಿಷ್ಟಗೊಳಿಸುತ್ತದೆ.

ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದು, ಈ ಪಾತ್ರಕ್ಕಾಗಿ ಅವರು ವಿಶೇಷ ತರಬೇತಿಯಲ್ಲಿದ್ದಾರೆ. ಸಾಯಿಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ಭರತನಾಗಿ ಆದಿನಾಥ್ ಕೊಠಾರೆ ನಟಿಸುತ್ತಿದ್ದಾರೆ. ಹನುಮಾನ್ ಪಾತ್ರದ ಭಾರವನ್ನು ಸನ್ನಿ ಡಿಯೋಲ್ ಹೊತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ಮಹತ್ವದ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿ, ಕಾಜಲ್ ಅಗರ್ವಾಲ್ ಮಂಡೋದರಿಯಾಗಿ, ಲಾರಾ ದತ್ತ ಕೈಕೇಯಿಯಾಗಿ ನಟಿಸುತ್ತಿದ್ದಾರೆ. ಶಿವನ ಪಾತ್ರದಲ್ಲಿ ಮೋಹಿತ್ ರೈನಾ, ಇಂದ್ರನಾಗಿ ಕುನಾಲ್ ಕಪೂರ್ ಅಭಿನಯಿಸುತ್ತಿದ್ದಾರೆ.

ಈ ದೊಡ್ಡ ತಾರಾಬಳಗವಿರುವ ‘ರಾಮಾಯಣ’ದ ಪ್ರದರ್ಶನಕ್ಕೆ ಪ್ರೇಕ್ಷಕರು ಅತ್ಯಂತ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ಎಷ್ಟು ವಿಜೃಂಭಣೆಯಿಂದ ಮೂಡಿಬರಲಿದೆ ಎಂಬುದನ್ನು ನೋಡಲು ದೀಪಾವಳಿ 2026ವರೆಗೂ ಕಾಯಬೇಕಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!