ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶವೇ ಚಂದ್ರಯಾನ-3ಉಡಾವಣೆಗೆ ಕಾತರದಿಂದ ಕಾಯುತ್ತಿದೆ.
ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಕಲ ಸಿದ್ಧತೆ ಮಾಡಿದ್ದು,ಇನ್ನೇನು ಕೆಲವೇ ನಿಮಿಷಗಳಲ್ಲಿ ಚಂದ್ರಯಾನ-3 ಉಡಾವಣೆಯಾಗಲಿದೆ. ಈ ಮಿಷನ್ ಯಶಸ್ಸು ಕಾಣಲಿ ಎಂದು ಬಾಲಿವುಡ್ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ಸುನೀಲ್ ಶೆಟ್ಟಿ ಚಂದ್ರನೆಡೆಗಿನ ಹೆಜ್ಜೆ ಸುಲಲಿತವಾಗಿರಲಿ, ವಿಶ್ವವೇ ನಮ್ಮ ದೇಶದ ಕಡೆ ಎದುರು ನೋಡುವಂತೆ ಮಾಡೋಣ ಎಂದಿದ್ದಾರೆ.
ಮತ್ತೊಮ್ಮೆ ಪುಟಿದೇಳುವ ಸಮಯ ಬಂದಾಗಿದೆ, ಕೋಟ್ಯಾಂತರ ಹೃದಯಗಳು ನಿಮಗಾಗಿ ಪ್ರಾರ್ಥನೆ ಮಾಡುತ್ತಿವೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. ನಟ ಅನುಪಮ್ ಖೇರ್ ಕೂಡ ಶುಭ ಹಾರೈಸಿದ್ದು, ಭಾರತ ಇದೀಗ ಮೂರನೇ ಚಂದ್ರಯಾನಕ್ಕೆ ಸಿದ್ಧವಾಗಿದೆ, ಇಸ್ರೋ ವಿಜ್ಞಾನಿಗಳಿಗೆ ಆಲ್ ದಿಬೆಸ್ಟ್ ನಮ್ಮ ಧ್ವಜ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂದಿದ್ದಾರೆ.
ಉಡಾವಣೆ ರೋಚಕತೆಯಿಂದ ಕೂಡಿದೆ, ಟೀಂ ಆಲ್ ದಿ ಬೆಸ್ಟ್ ನೀವು ನಮ್ಮ ಹೆಮ್ಮೆ ಎಂದು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.