ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಜೀರಿಯಾದ ಈಶಾನ್ಯ ಬೊರ್ನೊ ರಾಜ್ಯದಲ್ಲಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 48 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯದ ತುರ್ತು ಸೇವೆಗಳನ್ನು ಉಲ್ಲೇಖಿಸಿದೆ.
ಶನಿವಾರ ಮಧ್ಯಾಹ್ನ 3 ಗಂಟೆಗೆ ಮದುವೆ ಸಮಾರಂಭದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ನಂತರ, ಮತ್ತೊಂದು ಸ್ಫೋಟವು ಜನರಲ್ ಹಾಸ್ಪಿಟಲ್ ಗ್ವೋಜಾದಲ್ಲಿ ನಡೆದಿದೆ.
ಬೊರ್ನೊ ಸ್ಟೇಟ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (SEMA) ಡೈರೆಕ್ಟರ್ ಜನರಲ್ ಬರ್ಕಿಂಡೋ ಮುಹಮ್ಮದ್ ಸೈದು ಅವರು ಗ್ವೋಜಾ ಟೌನ್‌ನಲ್ಲಿ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಬೊರ್ನೊ ಸ್ಟೇಟ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ-ಸೆಮಾ ಪ್ರಕಾರ, ಸತ್ತವರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ.