ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ವೇಳೆ ಬಿಜೆಪಿ ಮಾಜಿ ಶಾಸಕರ ಪತ್ನಿ ಸಾವನ್ನಪ್ಪಿದ್ದಾರೆ.
ಸಾಯಿಕುಲ್ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಯಮ್‌ಥಾಂಗ್ ಹಾಕಿಪ್ ಅವರ ಮನೆಯ ಪಕ್ಕದಲ್ಲೇ ಬಾಂಬ್ ಸ್ಫೋಟ ಸಂಭವಿಸಿದೆ. ಹೌಕಿಪ್ ಅವರ 2ನೇ ಪತ್ನಿ ಸಪಂ ಚಾರುಬಾಲಾ ಅವರು ಸ್ಫೋಟದಲ್ಲಿ ಗಾಯಗೊಂಡ ನಂತರ ಅವರನ್ನು ಸಾಯಿಕುಲ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದಾಗ ಹಾಕಿಪ್ ಅವರ ಮನೆಯಲ್ಲೇ ಇದ್ದರು. ಆದ್ರೆ ಅವರು ಅಪಾಯದಿಂದ ಪಾರಾಗಿದ್ದಾರೆ.