ಕಲಬುರಗಿ ಹೈಕೋರ್ಟ್ ನಲ್ಲಿ ಬಾಂಬ್ ಬ್ಲಾಸ್ಟ್ ಅಣುಕು ಪ್ರದರ್ಶನ

ಹೊಸದಿಗಂತ ವರದಿ, ಕಲಬುರಗಿ:

ಆಪರೇಷನ್ ಅಭ್ಯಾಸ ನಾಗರಿಕ ರಕ್ಷಣಾ ಕಾರ್ಯಚರಣೆ ಅಂಗವಾಗಿ ಕಲಬುರಗಿ ಹೈಕೋರ್ಟ್ ಅವರಣದಲ್ಲಿ ಶುಕ್ರವಾರ ಸಂಜೆ ಬಾಂಬ್ ಬ್ಲಾಸ್ಟ್ ಸೃಷ್ಠಿಸಿ ತದನಂತರ ರಕ್ಷಣಾ ಕಾರ್ಯಚರಣೆಯ ಸನ್ನಿವೇಶದ ಕುರಿತ ಅಣುಕು ಪ್ರದರ್ಶನ ಕೋರ್ಟ್ ಅವರಣದಲ್ಲಿ ನಡೆಯಿತು.

ಹೈಕೋರ್ಟ್ ನಲ್ಲಿ ಡ್ರೋನ್ ಮೂಲಕ ಬಾಂಬ್ ಹಾಕಿರುವುದನ್ನು ಸೈರನ್ ಅಪಾಯದ ಸಂದೇಶ ಖಚಿತಪಡಿಸುತ್ತಿದ್ದಂತೆ ಗಾಬರಿಗೊಂಡ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು, ಕಕ್ಷಿದಾರರು ಕಚೇರಿಯಿಂದ ಓಡಿ ಬರುವ ದೃಶ್ಯ, ಸುದ್ದಿ ಅರಿತು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೋರ್ಟ್ ಅವರಣ ತಪಾಸಣೆಗೊಳಪಡಿಸಿ ಪತ್ತೆಯಾದ ಒಂದು ಜೀವಂತ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯ ನಡೆಸಲಾಯಿತು.

ಇನ್ನು ಸಿ.ಐ.ಎಸ್.ಎಫ್ ಸೇನಾ ಪಡೆ ಹೈಕೋರ್ಟ್ ಆವರಣ ಮತ್ತು ಕಟ್ಟಡ ಸುತ್ತುವರಿದಿದ್ದಲ್ಲದೆ ಕಟ್ಟಡದಲ್ಲಿ ಉಗ್ರರು, ಯಾರಾದರು ಅಡಗಿದಾರೆಯೆ? ಒತ್ತೆಯಾಳು ಇರಿಸಲಾಗಿದಿಯೇ? ಗಾಯಾಳುಗಳು ಸಿಲುಕಿರುವರೆ? ಎಂದು ತಪಾಸಣೆ ಮಾಡುವ ಸನ್ನಿವೇಶ ಕಂಡುಬಂತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!