March 16, 2026
Monday, March 16, 2026
spot_img

ರಜನಿಕಾಂತ್, ಧನುಷ್ ಮನೆಗೆ ಬಂತು ಬಾಂಬ್ ಬೆದರಿಕೆ: ಪೊಲೀಸರ ತಪಾಸಣೆಗೆ ನೋ ಹೇಳಿದ್ರಾ ನಟರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟರಾದ ರಜನಿಕಾಂತ್ ಮತ್ತು ಧನುಷ್ ಅವರ ನಿವಾಸಗಳಲ್ಲಿ ಬಾಂಬ್‌ ಇಡಲಾಗಿದೆ ಎಂಬ ಬೆದರಿಕೆ ಇಮೇಲ್‌ಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವೀಕರಿಸಿದ್ದಾರೆ ಎಂದು ತಮಿಳುನಾಡು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ತೇನಾಂಪೇಟೆ ಪೊಲೀಸರ ಪ್ರಕಾರ, ಅಕ್ಟೋಬರ್ 27 ರಂದು ಬೆಳಗ್ಗೆ 8.30 ರ ಸುಮಾರಿಗೆ ರಜನಿಕಾಂತ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇಮೇಲ್‌ ಪೊಲೀಸರಿಗೆ ಬಂದಿದೆ.

‘ಪೊಲೀಸರು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ರಜನಿಕಾಂತ್ ಅವರ ಮನೆಗೆ ತೆರಳಿದಾಗ, ಅವರು ಬಾಂಬ್ ಸ್ಕ್ವಾಡ್‌ನ ಸಹಾಯದಿಂದ ಶೋಧ ಕಾರ್ಯಾಚರಣೆಯ ಅಗತ್ಯವಿಲ್ಲ ಎಂದು ನಮಗೆ ತಿಳಿಸಿದರು’.

ಅದೇ ದಿನ ಸಂಜೆ 6.30 ಕ್ಕೆ ಎರಡನೇ ಬೆದರಿಕೆ ಪತ್ರ ಬಂದಿದ್ದು, ರಜನಿಕಾಂತ್ ಅವರ ತಂಡ ಮತ್ತೆ ಭದ್ರತಾ ತಪಾಸಣೆಯನ್ನು ನಿರಾಕರಿಸಿತು.

ಅದೇ ದಿನ ನಟ ಧನುಷ್ ಅವರ ಮನೆಯಲ್ಲೂ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಪತ್ರವೂ ಬಂದಿದೆ. ಅವರು ಕೂಡ ನಮ್ಮ ಸಹಾಯವನ್ನು ನಿರಾಕರಿಸಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !