ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಷ್ಟರಿಗೆ ದೇವರಲ್ಲಿ ಭಯವಾಗಲೀ ಭಕ್ತಿಯಾಗಲೀ ಇರುವುದಿಲ್ಲ. ಬೆಳಗಾವಿ ಪುರಾಣ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ ನೀಡಲಾಗಿದೆ.
ಮುಂದೊಂದು ದಿನ ಕಪಿಲೇಶ್ವರ ದೇವಸ್ಥಾನವನ್ನು ಸ್ಫೋಟಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಗಸ್ಟ್ 12ರಂದು Marvelous belgaum ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆದಾರ ರಾಕೇಶ್ ನಂದಗಡ ಎಂಬುವವರು ಕಪಿಲೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸ್ಟೋರಿ ಹಂಚಿಕೊಂಡಿದ್ದರು. ಈ ಸ್ಟೋರಿ ನೋಡಿದ ಇಲಾಯತ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆದಾರ ರಿಪ್ಟ್ ಮಾಡಿದ್ದು, ಮಾಷಾ ಅಲ್ಲಾ ಇಲ್ಲಿ ಬಾಂಬ್ ಹಾಕ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇದನ್ನು ಗಮನಿಸಿದ ರಾಕೇಶ್ ನಂದಗಡ ಅವರು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.