ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್‌ನ ಫುಕೆಟ್ ದ್ವೀಪದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಥೈಲ್ಯಾಂಡ್‌ನಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಲಾಗಿತ್ತು ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಹೇಳಿದ್ದಾರೆ. ಇದೀಗ ವಿಮಾನ AI 379 ಲ್ಯಾಂಡ್ ಆಗಿದ್ದು, ಹಾರಾಟ ಮಾಡುತ್ತಿದ್ದ ವೇಳೆ ಈ ಬೆದರಿಕೆ ಬಂದಿದೆ.
ಈ ಕಾರಣದಿಂದ ತಕ್ಷಣ ಭೂಸ್ಪರ್ಶಕ್ಕೆ ಮನವಿ ಮಾಡಲಾಗಿದೆ. ಅಹಮದಾಬಾದ್ ವಿಮಾನ ದುರಂತ ಇನ್ನು ಮಾಸಿಲ್ಲ, ಈ ಹೊತ್ತಿನಲ್ಲೇ ಮತ್ತೊಂದು ಬೆದರಿಕೆ ಕಾರಣವಾಗಿದೆ. ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇದೀಗ ಈ ವಿಚಾರ ಸಾರ್ವಜನಿಕರಲ್ಲಿ ಹಾಗೂ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.
ಇದೀಗ ಬಾಂಬ್ ಬೆದರಿಕೆಯ ನಂತರ ಏರ್ ಇಂಡಿಯಾ ವಿಮಾನ ಸಿಬ್ಬಂದಿಗಳು ವಿಮಾನ AI 379ನಿಂದ ಪ್ರಯಾಣಿಕರನ್ನು ಹೊರಕ್ಕೆ ಕರದುಕೊಂಡು ಬಂದಿದ್ದಾರೆ ಎಂದು ಥೈಲ್ಯಾಂಡ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಪ್ರಾಥಮಿಕ ಶೋಧದ ನಂತರ ಸಂಬಂಧಪಟ್ಟ ಏರ್ ಇಂಡಿಯಾ ವಿಮಾನದೊಳಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ವಿಮಾನದಲ್ಲಿ 156 ಪ್ರಯಾಣಿಕರಿದ್ದರು. ಈ ವೇಳೆ ಯಾರು ಭಯಪಡಬೇಡಿ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಪ್ರಯಾಣಿಕರಿಗೂ ಹೇಳಿದ್ದಾರೆ.