ಆಕಾಸಾ ಏರ್‌ಗೆ ಬಾಂಬ್‌ ಬೆದರಿಕೆ: ಬೆಂಗಳೂರಿಗೆ ಹೊರಟಿದ್ದ ವಿಮಾನ ದೆಹಲಿಗೆ ವಾಪಸ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

174 ಪ್ರಯಾಣಿಕರೊಂದಿಗೆ ಪ್ರಯಾಣ ಬೆಳೆಸಿದ್ದ ದೆಹಲಿ-ಬೆಂಗಳೂರು ಆಕಾಶ ಏರ್ ವಿಮಾನ ಬುಧವಾರ ಬಾಂಬ್ ಬೆದರಿಕೆ ಬಂದಿದ್ದು, ಕೂಡಲೇ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ.

QP 1335 ವಿಮಾನವು ಮಧ್ಯಾಹ್ನ 2 ಗಂಟೆಗೆ ದೆಹಲಿಯಲ್ಲಿ ಇಳಿಯಲು ಸಿದ್ಧವಾಗಿದೆ ಎಂದು ಆಕಾಶ ಏರ್ ಹೇಳಿಕೆಯಲ್ಲಿ ತಿಳಿಸಿದೆ.

ಆಕಾಸಾ ಏರ್‌ ನಿರ್ವಹಣರ ಮಾಡುವ ವಿಮಾನ – QP 1335 ಮಧ್ಯಾಹ್ನ 12.16 ಕ್ಕೆ ದೆಹಲಿಯಿಂದ ಹೊರಟಿತ್ತು. ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ ಹಾರಾಟ ಆರಂಭಿಸಿ ಒಂದು ಗಂಟೆ ಆಗುವ ಮುನ್ನವೇ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು. ಇದರಿಂದಾಗಿ ಬೋಯಿಂಗ್‌ 737 ವಿಮಾನ ದೆಹಲಿಗೆ ವಾಪಸಾಗಿ, ಮಧ್ಯಾಹ್ನ 2 ಗಂಟೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ಇಳಿದಿದೆ.

ಕಳೆದ ಮೂರು ದಿನಗಳಲ್ಲಿ ಭಾರತದ ವಿಮಾನಯಾನ ಕಂಪನಿಯ ವಿಮಾನಗಳಿಗೆ ಬಂದಿರುವ 12ನೇ ಬಾಂಬ್‌ ಬೆದರಿಕೆ ಕರೆಯಾಗಿದೆ. ಏರ್‌ ಇಂಡಿಯಾದ 2 ಹಾಗೂ ಇಂಡಿಗೋದ 1 ಅಂತಾರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ಬಾಂಬ್‌ ಬದರಿಕೆ ಕರೆ ಬಂದಿದ್ದರೆ, ಮಂಗಳವಾರ ದೇಶದ ಪ್ರಮುಖ ವಿಮಾನಯಾನ ಕಂಪನಿಗಳ 8 ವಿಮಾಗಳಿಗೆ ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು.

ವಿಮಾನದ ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿದರು, ವಿಮಾನವನ್ನು ದೆಹಲಿಗೆ ಹಿಂತಿರುಗಿಸಿದರು ಮತ್ತು ಮಧ್ಯಾಹ್ನ 1.48 ಕ್ಕೆ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಆಕಾಸಾ ಏರ್ ಪ್ರಕಟಣೆಯ ಮೂಲಕ ತಿಳಿಸಿದೆ

‘ನಿಗದಿತ ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ, ವಿಮಾನವನ್ನು ಲ್ಯಾಂಡಿಂಗ್ ನಂತರ ಪ್ರತ್ಯೇಕ ವಿಭಾಗಕ್ಕೆ ಕೊಂಡೊಯ್ಯಲಾಯಿತು. ಅಗತ್ಯ ಸುರಕ್ಷತೆ ಮತ್ತು ಭದ್ರತಾ ತಪಾಸಣೆಗಳನ್ನು ಕೈಗೊಂಡ ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಎಲ್ಲಾ ಪ್ರಯಾಣಿಕರನ್ನು ಮಧ್ಯಾಹ್ನ 1.57 ಕ್ಕೆ ಇಳಿಸಲಾಯಿತು’ ಎಂದು ತಿಳಿಸಿದೆ.

‘ಆಕಾಸಾ ಏರ್‌ ವಿಮಾನ ಕ್ಯೂಪಿ 1335, 174 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಇದರಲ್ಲಿ 3 ಶಿಶಿಗಳು ಹಾಗೂ 7 ಮಂದಿ ಸಿಬ್ಬಂದಿ ಕೂಡ ಸೇರಿದ್ದರು. ಈ ಹಂತದಲ್ಲಿ ಭದ್ರತಾ ಅಲರ್ಟ್‌ಅನ್ನು ರಿಸೀವ್‌ ಮಾಡಲಾಗಿತ್ತು’ ಎಂದು ಆಕಾಸಾ ಏರ್‌ ವಕ್ತಾರ ತಿಳಿಸಿದ್ದಾರೆ. ಏರ್‌ಲೈನ್‌ನ ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದವು ಮತ್ತು “ಹೆಚ್ಚು ಮುನ್ನೆಚ್ಚರಿಕೆ” ಯೊಂದಿಗೆ ವಿಮಾನವನ್ನು ದೆಹಲಿಗೆ ತಿರುಗಿಸಲು ಪೈಲಟ್‌ಗೆ ಸಲಹೆ ನೀಡಿದ್ದರು.ಭದ್ರತಾ ಕಾಳಜಿಯ ಸ್ವರೂಪ ಅಥವಾ ಬಾಂಬ್ ಬೆದರಿಕೆಯ ಮೂಲವನ್ನು ವಿಮಾನಯಾನ ಕಂಪನಿ ತಿಳಿಸಿಲ್ಲ. ಆಕಾಸಾ ಏರ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ಆಕಾಸಾ ಏರ್ ತಂಡಗಳು ಗ್ರೌಂಡ್‌ನಲ್ಲಿದ್ದು, ಎಲ್ಲಾ ಪ್ರಯಾಣಿಕರಿಗೆ ಅವರ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಸಿದ್ಧವಾಗಿವೆ,ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!