February 9, 2026
Monday, February 9, 2026
spot_img

ಜಪಾನ್, ಡಚ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ! ಈ ರಾಜ್ಯದ ಸಿಎಂ ಹೆಸರು ಉಲ್ಲೇಖ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿರುವ ಜಪಾನ್‌, ಡಚ್‌, ರಾಯಭಾರಿ ಕಚೇರಿಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿದೆ.

ಕಳೆದ 10 ದಿನಗಳ ಅಂತರದಲ್ಲಿ ದೂತವಾಸ ಕಚೇರಿಗಳಿಗೆ 2ನೇ ಬಾರಿಗೆ ಹಾಕಿರುವ ಬೆದರಿಕೆ ಇದಾಗಿದೆ. ಇಂದು ಬೆಳಗ್ಗೆ ಬೆಳಗ್ಗೆ 8.40ಕ್ಕೆ ರಾಯಭಾರ ಕಚೇರಿಯ ಮೇಲ್‌-ಐಡಿಗೆ ಬೆದರಿಕೆ ಮೆಸೇಜ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ಇನ್ನು ಬಾಂಬ್ ಬೆದರಿಕೆ ಇ-ಮೇಲ್​ನಲ್ಲಿ ಅಪರಿಚಿತರು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ ಮಾಡಿದ್ದಾರೆ. ಕೋರಮಂಡಲ್ ಹೋಟೆಲ್​ನ ಕೊಠಡಿ ಸಂಖ್ಯೆ 536ರಲ್ಲಿ ಸ್ಟಾಲಿನ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ವಿಐಪಿ ಪರಿಚಯ ಮಾಡಿಸುತ್ತೇನೆಂದು ಹೋಟೆಲ್​ಗೆ ಕರೆಸಿ ಕೃತ್ಯ ಎಸಗಲಾಗಿದ್ದು, ಅರ್ಜುನ್ ದೊರೆ ರಾಜಶೇಖರ್ ಎಂಬಾತ ಮಹಿಳೆಯನ್ನು ಕರೆದೊಯ್ದಿದ್ದ.

ಹೋಟೆಲ್​​ಗೆ ಹೋದಾಗ ಸ್ಟಾಲಿನ್ ಅರೆಬೆತ್ತಲಾಗಿ ಕುಳಿತಿದ್ದರು. ಈ ಬಗ್ಗೆ ದೂರು ನೀಡಿದ್ದರೂ ತಮಿಳುನಾಡು ಪೊಲೀಸರು ಕೇಸ್ ಹಾಕಿಲ್ಲ. ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಜಪಾನ್ ದೂತಾವಾಸದ ಶೌಚಾಲಯದಲ್ಲಿ 4 RDX, IED ಬಾಂಬ್ ಇಟ್ಟಿದ್ದೇವೆ ಎಂದು ಉಲ್ಲೇಖಿಸಿರೋದು ಕಂಡುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !