ಶಿವಾಜಿನಗರದ ಮಸೀದಿಯಲ್ಲಿ ಬಾಂಬ್​ ಇದೆ: ತಡರಾತ್ರಿ ಬಂದ ಕರೆಗೆ ಅಲರ್ಟ್‌ ಆದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಶಿವಾಜಿನಗರದ ಮಸೀದಿಯೊಂದರಲ್ಲಿ ಬಾಂಬ್​ ಇದೆ ಎಂದು ಅನಾಮಧೇಯ ಕರೆಯೊಂದು ನಿನ್ನೆ ತಡರಾತ್ರಿ ಬಂದಿದ್ದು, ಪೊಲೀಸರ ನಿದ್ದೆಗೆಡುವಂತೆ ಮಾಡಿತ್ತು.

ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸ್‌ ಸಹಾಯವಾಣಿ ಸಂಖ್ಯೆ 112ಕ್ಕೆ ಈ ಕರೆ ಬಂದಿದ್ದು, ತಕ್ಷಣವೇ ಪೊಲೀಸರು ಅಲರ್ಟ್‌ ಆಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಶಿವಾಜಿನಗರದ ಪೊಲೀಸರು, ಎಲ್ಲೆಡೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಹುಸಿಬಾಂಬ್‌ ಕರೆ ಇದಾಗಿದೆ ಎಂದು ತಿಳಿದುಬಂದಾಗ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಹುಸಿ ಬಾಂಬ್‌ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಾಗಿ ಶಿವಾಜಿನಗರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!