ನವ ಕೇರಳ ಸಮಾವೇಶಕ್ಕೆ ಬಾಂಬ್ ಬೆದರಿಕೆ ಪತ್ರ: ಪೊಲೀಸರು ಹೈ ಅಲರ್ಟ್

ಹೊಸದಿಂತ ಡಿಜಿಟಲ್ ಡೆಸ್ಕ್:
ಕೇರಳದ ನವ ಕೇರಳ ಸಮಾವೇಶಕ್ಕೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಇನ್ನಷ್ಟು ಹೆಚ್ಚಿಸಲಾಗಿದೆ.
ಕಾನಂ ರಾಜೇಂದ್ರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಸಮಾವೇಶ ಸೋಮವಾರ ನಡೆಯಲಿದೆ. ಇದಕ್ಕೂ ಮುನ್ನ ನಡೆದಿರುವ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.
ನಾವು ಹಳೆಯ ಕಮ್ಯುನಿಸ್ಟರು ಎಂದು ಹೇಳಿಕೊಂಡಿರುವ ಆಗಂತುಕರು ಎರ್ನಾಕುಳಂ ಎಡಿಎಂ ಕಚೇರಿಗೆ ಈ ಬೆದರಿಕೆ ಪತ್ರ ರವಾನಿಸಿದ್ದಾರೆ. ಎರ್ನಾಕುಳಂ ಜಿಲ್ಲೆಯ ತೃಕ್ಕಾಕರ ನವಕೇರಳ ಸದಸ್ ವೇದಿಕೆಗೆ ಬಾಂಬ್ ಇರಿಸುವುದಾಗಿ ಬೆದರಿಸಲಾಗಿದೆ.
ಈ ಬಗ್ಗೆ ಪೊಲೀಸರು ಅಲರ್ಟ್ ಆಗಿದ್ದು, ವ್ಯಾಪಕ ತನಿಖೆ, ತಪಾಸಣೆಯಲ್ಲಿ ತೊಡಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!