ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಪುರುಷರ 51 ಕೆಜಿ ಫ್ಲೈವೇಟ್ನಲ್ಲಿ ಭಾರತದ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದಿದ್ದಾರೆ.
ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ ನಡೆದ ಫೈನಲ್ನಲ್ಲಿ ಭಾರತದ ಬಾಕ್ಸರ್ ಏಕಪಕ್ಷೀಯವಾಗಿ ಕಿಯಾರನ್ ಮೆಕ್ಡೊನಾಲ್ಡ್ ಅವರನ್ನು ಸೋಲಿಸಿದರು. 2018 ರ ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಮಿತ್ ಪಂಗಲ್ ಬರ್ಮಿಂಗ್ಹ್ಯಾಮ್ ನಲ್ಲಿ ಅದನ್ನು ಚಿನ್ನವಾಗಿಸಿದ್ದಾರೆ. ಇದು ಕಾಮನ್ ವೆಲ್ತ್ 2022 ರಲ್ಲಿ ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಸಿಗುತ್ತಿರುವ ಐದನೇ ಪದಕ ಹಾಗೂ ಎರಡನೇ ಚಿನ್ನದ ಪದಕವಾಗಿದೆ. ಮಹಿಳೆಯರ ವಿಭಾಗದಲ್ಲಿ ಎರಡು ಬಾರಿಯ ಯುವ ವಿಶ್ವ ಚಾಂಪಿಯನ್ ನಿತು ಘಂಗಾಸ್ ಮೊದಲು ಮಹಿಳೆಯರ 48 ಕೆಜಿ ಕನಿಷ್ಠ ತೂಕದಲ್ಲಿ ಜಯಗಳಿಸಿದ್ದರು.
ಅಮಿತ್ ಪಂಗಲ್ಗ ರ ಬಲಿಷ್ಠ ಪಂಚ್ಗಳು ಎದುರಾಳಿಯನ್ನು ಕಂಗೆಡಿಸಿದವು. ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ ಅಮಿತ್ ಎರಡನೇ ಸುತ್ತಿನಲ್ಲಿ ಮತ್ತಷ್ಟು ಆಕ್ರಮಣಕಾರಿಯಾದರು. ಅವರ ಬಲಿಷ್ಠ ಹೊಡೆತವೊಂದರಿಂದ ಗಾಯಗೊಂಡ ಎದುರಾಳಿ ಮೆಕ್ಡೊನಾಲ್ಡ್ ಗೆ ಮುಖದ ಮೇಲೆ ಹೊಲಿಗೆ ಹಾಕಬೇಕಾಯಿತು.
ಮೂರನೇ ಸುತ್ತಿನಲ್ಲೂ ಅಮಿತ್ ರ ಪಾರಮ್ಯ ಮುಂದುವರೆದಿದ್ದರಿಂದ ಅವರನ್ನು ಸರ್ವಾನುಮತದಿಂದ ವಿಜೇತ ಎಂದು ಘೋಷಿಸಲಾಯಿತು. ಈ ಮೂಲಕ ಅಮಿತ್ ಪಂಗಾಲ್ ತಮ್ಮ ಮೊದಲ ಕಾಮನ್ವೆಲ್ತ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ