VIRAL | ಆನ್‌ಲೈನ್‌ನಲ್ಲಿ ಬರೋಬ್ಬರಿ 70,000 ಲಾಲಿಪಾಪ್‌ ಆರ್ಡರ್‌ ಮಾಡಿದ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಕ್ಕಳ ಕೈಲಿ ಮೊಬೈಲ್‌ ಕೊಡೋ ಪೋಷಕರೇ ಇಲ್ಲಿ ನೋಡಿ, ಬಾಲಕನೊಬ್ಬ ಬರೋಬ್ಬರಿ 70,000ಲಾಲಿಪಾಪ್‌ನ್ನು ಮನೆಗೆ ಆರ್ಡರ್‌ ಮಾಡಿದ್ದಾನೆ.

ಅಮೆರಿಕದಲ್ಲಿ 8 ವರ್ಷದ ಬಾಲಕನೊಬ್ಬನು ಅಮೆಜಾನ್ ನಲ್ಲಿ 70,000 ಲಾಲಿಪಾಪ್‌ ಗಳನ್ನು ಆರ್ಡರ್ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದರ ಬೆಲೆ ಬರೋಬ್ಬರಿ 3.3 ಲಕ್ಷ ರೂಪಾಯಿಯಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ತಾಯಿ ಹಂಚಿಕೊಂಡಿದ್ದಾಳೆ.

ಮಗುವು ಆನ್ಲೈನ್ ನಲ್ಲಿ ಲಾಲಿಪಾಪ್ ಆರ್ಡರ್ ಮಾಡಿರುವುದೇ ತಾಯಿಗೆ ತಿಳಿದಿರಲಿಲ್ಲ. ತನ್ನ ಕ್ರೆಡಿಟ್ ಕಾರ್ಡ್‌ನಿಂದ ಭಾರಿ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂಬ ಮೆಸೇಜ್ ಬಂದಾಗ ಶಾಕ್ ಆಗಿದೆ. ಅದಲ್ಲದೇ, ಮನೆಯ ಬಾಗಿಲಿಗೆ ಲಾಲಿಪಾಪ್‍ಗಳ ಬಾಕ್ಸ್‌ಗಳನ್ನು ಬಂದಿದ್ದು, ಇದನ್ನು ಪರಿಶೀಲಿಸಿದಾಗ ತನ್ನ ಮಗ ಆನ್ಲೈನ್ ನಲ್ಲಿ ಲಾಲಿಪಾಪ್ ಆರ್ಡರ್ ಮಾಡಿರುವುದು ತಿಳಿದು ಬಂದಿದೆ. ಅದಲ್ಲದೇ ಈಗಾಗಲೇ ಆರ್ಡರ್ ಮಾಡಿದ್ದ 22 ಬಾಕ್ಸ್‌ಗಳು ಮನೆಗೆ ಬಂದು ತಲುಪಿದ್ದು, ಇನ್ನು 8 ಬಾಕ್ಸ್ ಲಾಲಿಪಾಪ್ ಬರಬೇಕಿತ್ತು.

ಅದಲ್ಲದೇ ತನ್ನ ಖಾತೆಯಿಂದ 3.3 ಲಕ್ಷ ರೂ ಹಣವು ಕಟ್ ಗಿದ್ದು, ಕೊನೆಗೆ ಇನ್ನು ಡೆಲಿವರಿ ಆಗಬೇಕಿದ್ದ 8 ಬಾಕ್ಸ್‌ಗಳನ್ನು ಅದೇಗೆ ಅಮೆಜಾನ್ ಅವರ ಮನವೊಲಿಸಿ ಹಿಂದಿರುಗಿಸಲು ಮುಂದದಾಗ ಅವರು ನಿರಾಕರಿಸಿದ್ದಾರೆ. ಆದರೆ ಆಕೆ ಮಾತ್ರ ಬ್ಯಾಂಕ್ ಹಾಗೂ ಮಾಧ್ಯಮದರನ್ನು ಸಂಪರ್ಕಿಸಿದ್ದು, ಅಮೆಜಾನ್ ಅವರು ಆಕೆಗೆ ಕರೆ ಮಾಡಿ ಹಣವನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡಿದೆ. ಅದಲ್ಲದೇ ಈ ಘಟನೆಯ ಬಳಿಕ ಮಹಿಳೆಯೂ ತನ್ನ ಮೊಬೈಲ್ ಸೆಟ್ಟಿಂಗ್ ಬದಲಾಯಿಸಿರುವ ಬಗ್ಗೆ ಹೇಳಿಕೊಂಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!