ಕುರಿ ಕಾಯುತ್ತಿದ್ದ ಬಾಲಕ ಮರಳಿ ಶಾಲೆಗೆ: ಶಾಲೆಗೆ ಹೋದ್ರೆ ಮುಂದೆ ಸಿಎಂ ಆಗ್ಬೋದು ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ಮೊಳಕಾಲ್ಮೂರಿನ ಬಸಾಪುರದಲ್ಲಿ ಪೋಷಕರು ಮಗನನ್ನು ಕುರಿ ಕಾಯುವ ಕೆಲಸಕ್ಕೆ ಕಳುಹಿಸಿದ್ದು, ಇದೀಗ ಬಾಲಕ ಮರಳಿ ಶಾಲೆಗೆ ತೆರಳುತ್ತಿದ್ದಾನೆ.

ಟ್ವಿಟರ್‌ನಲ್ಲಿ ಬಾಲಕನ ಬಗ್ಗೆ ಟ್ವೀಟ್ ಒಂದು ವೈರಲ್ ಆಗಿದ್ದು, 11 ವರ್ಷದ ಯೋಗೇಶ್‌ಗೆ ಓದಿನಲ್ಲಿ ಆಸಕ್ತಿ ಇದೆ ಆದರೆ ಬಡತನದಿಂದಾಗಿ ಆತನನ್ನು ಮನೆಯವರು ಕುರಿ ಕಾಯಲು ಕಳುಹಿಸಿದ್ದರು.

ಇದೀಗ ಅಧಿಕಾರಿಗಳು ಯೊಗೇಶ್ ಪೋಷಕರ ಮನವೊಲಿಸಿ ಆತನನ್ನು ಮತ್ತೆ ಶಾಲೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ. ನಾನು ಚಿಕ್ಕವನಿದ್ದಾಗ ಶಿಕ್ಷಣದಿಂದ ವಂಚಿತನಾಗಿದ್ದೆ. ರಾಜಪ್ಪ ಮೇಷ್ಟ್ರು ನನ್ನನ್ನು ಐದನೇ ಕ್ಲಾಸ್‌ಗೆ ದಾಖಲಿಸಿದ್ರು. ಅಂದು ಶಿಕ್ಷಣ ಸಿಕ್ಕಿದ್ದಕ್ಕೆ ಸಿಎಂ ಆದೆ, ಯಾರಿಗೆ ಗೊತ್ತು ಮುಂದೊಂದು ದಿನ ನೀನೂ ಸಿಎಂ ಆಗಬಹುದು ಎಂದು ಬಾಲಕನನ್ನು ಹುರಿದುಂಬಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!