March 9, 2026
Monday, March 9, 2026
spot_img

ಹುಡುಗಿಯನ್ನು ಒಪ್ಪಿಸೋಕೆ ಇಡೀ ಮನೆಯವರನ್ನೇ ಡ್ಯಾನ್ಸ್‌ ಮಾಡಿಸಿದ ಪ್ರಿಯಕರ, ಬಾಲ್ಕನಿಯಿಂದ ನಕ್ಕ ಚೆಲುವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ರೀತಿ ಬ್ಯೂಟಿಫುಲ್‌ ಆಗಿ ಪ್ರಪೋಸ್‌ ಮಾಡಿದ್ರೆ ಯಾವ ಹುಡುಗಿ ತಾನೆ ನೋ ಅಂತಾಳೆ ಹೇಳಿ? ಪ್ರಿಯಕರನೊಬ್ಬ ತನ್ನ ಹುಡುಗಿಯನ್ನು ಮದುವೆಗೆ ಒಪ್ಪಿಸೋಕೆ ಕುಟುಂಬ ಸಮೇತರಾಗಿ ರಸ್ತೆಯಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಟ್ರೆಂಡ್‌ ಆಗಿದೆ..

ಪ್ರಿಯಕರ ತನ್ನ ಪ್ರೇಯಸಿಯ ಮನೆಯ ಕೆಳಗೆ ನಿಂತು ಡ್ಯಾನ್ಸ್‌ ಮಾಡಿದ್ದಾನೆ. ಫ್ಯಾಮಿಲಿ ಹಾಗೂ ಸ್ನೇಹಿತರ ಜತೆ ತೆನು ಲೇಕೆ ಮೇ ಜಾವಂಗಾ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ದೃಶ್ಯವನ್ನು ಬಾಲ್ಕನಿಯಿಂದ ನೋಡುತ್ತಿರುವ ಯುವತಿ, ಈ ಭರ್ಜರಿ ಸರ್ಪ್ರೈಸ್ ನೋಡಿ ಆಶ್ಚರ್ಯಗೊಂಡಿದ್ದಾರೆ.

ಡ್ಯಾನ್ಸ್‌ ಮುಗಿದ ನಂತರ ಯುವಕ ಆಕೆಗೆ ಪ್ರಪೋಸ್‌ ಮಾಡಿದ್ದು, ಯುವತಿ ಕೂಡ ಒಪ್ಪಿಗೆ ನೀಡಿದ್ದಾರೆ. ಬರೀ ಹಣದಿಂದ ನೀಡುವ ಸರ್ಪ್ರೈಸ್‌ ಕ್ಷಣಿಕ ಖುಷಿ ನೀಡುತ್ತದೆ. ಆದರೆ ಮನಸ್ಸಿನಿಂದ ನೀಡುವ ಈ ರೀತಿ ಸರ್ಪ್ರೈಸ್‌ ಸದಾ ಇರುತ್ತದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !