VIRAL VIDEO| ಏನ್‌ ಟ್ಯಾಲೆಂಟ್‌ ಗುರೂ..ಡೆಸ್ಕ್‌ ಮೇಲೆ ಡ್ರಮ್‌ ಬಾರಿಸಿದ ಶಾಲಾ ಮಕ್ಕಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಹುಡುಗರ ಪ್ರತಿಭೆ ಸಾಮಾನ್ಯವಲ್ಲ. ಇವರ ಪ್ರತಿಭೆಯನ್ನು ನೋಡಿದರೆ ಅವರೇ ಭವಿಷ್ಯದ ರಾಕ್ ಬ್ಯಾಂಡ್ ಎಂದು ಅನಿಸುತ್ತದೆ. ತರಗತಿಯೊಂದರಲ್ಲಿ ಡೆಸ್ಕ್ ಮೇಲೆ ನಾಲ್ವರು ಹುಡುಗರು ಡ್ರಮ್ ಬಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಾಲ್ವರು ಹುಡುಗರ ಸಂಗೀತವನ್ನು ನೀವು ಕೇಳಿದರೆ, ವ್ಹಾವ್‌ ಎನ್ನದೆ ಇರಲಾರಿರಿ..

ತರಗತಿಯಲ್ಲಿ ನಾಲ್ಕು ಹುಡುಗರು ಮೇಜಿನ ಮೇಲೆ ಬಡಿಯುವ ಸದ್ದು ತುಂಬಾ ಸೊಗಸಾಗಿದೆ. ಒಬ್ಬ ಬರಿ ಕೈಗಳಿಂದ ಡೆಸ್ಕ್‌ ಕುಟ್ಟಿದರೆ, ಮತ್ತೊಬ್ಬ ಜಾಮಿಟ್ರಿ ಬಾಕ್ಸ್‌, ಪೆನ್-ಪೆನ್ಸಿಲ್‌ಗಳಿಂದ ಮ್ಯೂಸಿಕ್ ಬಾರಿಸಿದರು. ಈ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಭವಿಷ್ಯದ ಶ್ರೇಷ್ಠ ರಾಕ್ ಬ್ಯಾಂಡ್‌ ಎಂಬ ಕಾಮೆಂಟ್‌ಗಳು ಪ್ರವಾಹದಂತೆ ಬಂದು ಬೀಳುತ್ತಿವೆ. ಸೋಷಿಯಲ್ ಮೀಡಿಯಾಗಳು ಮಣ್ಣಿನಲ್ಲಿರುವ ಅನೇಕ ಮಾಣಿಕ್ಯಗಳನ್ನು ಬೆಳಕಿಗೆ ತರುತ್ತಿವೆ ಎಂಬುದೂ ಸೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here