ನೀರಜ್‌ ಚೋಪ್ರಾ ಕ್ಲಾಸಿಕ್‌ 2025ಗೆ ಕೈ ಜೋಡಿಸಿದ ಬಿಪಿಸಿಎಲ್‌

ಹೊಸದಿಗಂತ ಬೆಂಗಳೂರು:

ಭಾರತದ ಅಥ್ಲೀಟ್‌ ಗಳ ಹೆಮ್ಮೆಯ ಕಾರ್ಯಕ್ರಮ ನೀರಜ್‌ ಚೋಪ್ರಾ ಕ್ಲಾಸಿಕ್‌ 2025ಗೆ ಭಾರತ್‌ ಪೆಟ್ರೋಲಿಯಂ ಕಾ‌ರ್ಪೋರೇಶನ್‌ ಲಿಮಿಟೆಡ್‌ ಕೂಡ ಕೈಜೋಡಿಸಿದೆ.

ಇದೇ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ವಿಶ್ವ ಅಥ್ಲೆಟಿಕ್ಸ್‌ಗಳ ಕಾಂಟಿನೆಂಟಲ್‌ ಟೂರ್‍‌ ಆಯೋಜಿಸಿದ್ದು ಜುಲೈ 5ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗೋಲ್ಡ್‌ ಲೆವೆಲ್‌ ಜಾವೆಲಿನ್‌ ಸ್ಫರ್ಧೆ ಆಯೋಜನೆಗೊಂಡಿದೆ.

ಈ ಕಾರ್ಯಕ್ರಮ ಕೇವಲ ಸ್ಪರ್ಧೆಯಾಗಿರದೇ ಜಾಗತಿಕಮಟ್ಟದಲ್ಲಿ ಸುದ್ದಿಯಾಗುವ ಭಾರತದ ನಿರ್ಧಾರವಾಗಿದೆ. ನೀರಜ್‌ ಚೋಪ್ರಾ ಕ್ಲಾಸಿಕ್‌ 2025 ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಅಥ್ಲೀಟ್‌ಗಳಾದ ಒಲಂಪಿಕ್ ಮೆಡಲ್‌ ವಿಜೇತ ಜೂಲಿಯಸ್‌ ಯೆಗೊ ಮತ್ತು ಥಾಮಸ್ ರೊಹ್ಲರ್ ಸೇರಿ ಹಲವರು ಭಾಗವಹಿಸಲಿದ್ದಾರೆ. ಇದೊಂದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಸ್ಟಾರ್ ಆಟಗಾರರ ಜಾವೆಲಿನ್‌ ಕಾರ್ಯಕ್ರಮವಾಗಿದೆ.

“ ನೀರಜ್‌ ಚೋಪ್ರಾ ಬಿಪಿಸಿಎಲ್‌ನ ಅಧಿಕ ಕಾರ್ಯಕ್ಷಮತೆ, ಭರವಸೆಯ ಪ್ರೀಮಿಯಂ ಪೆಟ್ರೋಲ್ ‘ಸ್ಪೀಡ್‌’ನ ಬ್ಯ್ರಾಂಡ್ ಅಂಬಾಸಿಡರ್ ಆಗಿದ್ದು , ವಿಶ್ವಮಟ್ಟದ ಅಥ್ಲೀಟ್ಸ್‌ನಿಂದ ಜಾಗತಿಕ ಐಕಾನ್‌ ಆಗಿರುವ ನೀರಜ್‌ ಚೋಪ್ರಾ ಅವರ ಈ ಪಯಣವನ್ನು ಬೆಂಬಲಿಸುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಬಿಪಿಸಿಎಲ್‌ನ ಬುಸಿನೆಸ್‌ ಹೆಡ್ ( ರಿಟೇಲ್‌) ಪರ್‍‌ದೀಪ್ ಗೋಯಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಕ್ರೀಡೆಗೆ ಹೊಸ ವ್ಯಾಖ್ಯಾನ ಬರೆಯುತ್ತಿರುವ ಹಾಗೂ ಭಾರತದ ಅಥ್ಲೀಟ್ಸ್‌ಗಳನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ಯುತ್ತಿರುವ ನೀರಜ್‌ ಅವರ ಧ್ಯೇಯ ಹಾಗೂ ಅವರ ನಾಯಕತ್ವವನ್ನು ನಾವು ಅಭಿನಂದಿಸುತ್ತದೆ. ವಿವಿಧ ದೇಶಗಳಿಂದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಎಲ್ಲಾ ಅಥ್ಲೇಟ್ಸ್ ಗಳನ್ನು ಬಿಪಿಸಿಎಲ್‌ ಸ್ವಾಗತಿಸುತ್ತದೆ. ಬಿಪಿಸಿಎಲ್‌ 1987ರಿಂದ 200 ಪ್ರತಿಭಾವಂತ ಅಥ್ಲೀಟ್ಸ್‌ಗಳಿಗೆ ಅಡ್ವಾನ್ಸ್ಡ್‌ ತರಬೇತಿ ಹಾಗೂ ರಾಷ್ಟ್ರೀಯ ಕ್ರೀಡಾ ಸ್ಕಾಲರ್‍‌ಶಿಪ್‌ ಕಾರ್ಯಕ್ರಮದ ಮೂಲಕ  ಬೆಂಬಲ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!