ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಬ್ರಾಡ್ ಹಡ್ಡಿನ್ 2023 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುಂಚಿತವಾಗಿ ಸಹಾಯಕ ಕೋಚ್ ಆಗಿ ಪಂಜಾಬ್ ಕಿಂಗ್ಸ್ ಪಾಳೆಯ ಸೇರಿಕೊಂಡಿದ್ದಾರೆ.
ಫ್ರಾಂಚೈಸಿಯು ನೂತನ ಕೋಚ್ ಆಗಿ ಇಂಗ್ಲೆಂಡ್ ಮಾಜಿ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಈಗ ಬೇಲಿಸ್ ಗೆ ಸಹಾಯಕರಾಗಿ 44 ವರ್ಷ ವಯಸ್ಸಿನ ಹಡ್ಡಿನ್ ಫ್ರಾಂಚೈಸಿಗೆ ಸೇರ್ಪಡೆಗೊಂಡಿದ್ದಾರೆ.
ಹ್ಯಾಡಿನ್ ಮತ್ತು ಬೇಲಿಸ್ ಇಬ್ಬರೂ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದಾರೆ. ಹಡಿನ್ 66 ಟೆಸ್ಟ್, 126 ODI ಮತ್ತು 34 T20 ಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ.
“ಹಡ್ಡಿನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ. ಉಳಿದ ಸಹಾಯಕ ಸಿಬ್ಬಂದಿಯನ್ನು ಶೀಘ್ರದಲ್ಲೇ ನೇಮಿಸಲಾಗುವುದು” ಎಂದು ಕಿಂಗ್ಸ್ ಮೂಲಗಳು ತಿಳಿಸಿವೆ.
ಕುಂಬ್ಳೆ ಜೊತೆಗೆ, ತಂಡವು ಸಹಾಯಕ ಕೋಚ್ ಜಾಂಟಿ ರೋಡ್ಸ್ ಮತ್ತು ಬೌಲಿಂಗ್ ಕೋಚ್ ಡೇಮಿಯನ್ ರೈಟ್ ಅವರ ಒಪ್ಪಂದವನ್ನು ನವೀಕರಿಸಿಲ್ಲ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ರೋಡ್ಸ್ 2020 ರ ಆವೃತ್ತಿಗೆ ಮುಂಚಿತವಾಗಿ ಪಂಜಾಬ್ ಸೇರಿಕೊಂಡಿದ್ದರು. ರೈಟ್ ಅದರ ಮುಂದಿನ ಆವೃತ್ತಿಯಲ್ಲಿ ತಂಡ ಸೇರಿದ್ದರು.
2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟ ಬೇಲಿಸ್ ನೇತೃತ್ವದಲ್ಲಿ ಪಂಜಾಬ್ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಭರವಸೆಯಲ್ಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ