ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ಸ್ಕೂಟರ್‌ನ ಬ್ರೇಕ್ ಕೈಕೊಟ್ಟ ಹಿನ್ನೆಲೆ ನಿಯಂತ್ರಣ ತಪ್ಪಿ ಮನೆಯ ಮೇಲ್ಛಾವಣಿ ಮೇಲೆ ಹಾರಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ವೇಗವಾಗಿ ಹೋಗ್ತಿದ್ದ ವೇಳೆ ಸ್ಕೂಟರ್‌ನ ಬ್ರೇಕ್ ಫೇಲ್ಯೂರ್ ಆಗಿದೆ. ಸ್ಕೂಟರ್ನಲ್ಲಿ ಹೋಗುತ್ತಿದ್ದ ಇಬ್ಬರು ಯುವತಿಯರು ಬ್ರೇಕ್ ಕೈಕೊಟ್ಟ ಪರಿಣಾಮ ಮನೆಯ ಛಾವಣಿಗೆ ಸ್ಕೂಟರ್ ಹಾರಿದೆ. ಸದ್ಯ ಯುವತಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದು. ಇವರಿಗೆ ಡ್ರೈವಿಂಗ್ ಲೈಸೆನ್ಸ್ ಕೊಟ್ಟಿದ್ದು ಯಾರು ಅಂತ ಜನ ಪ್ರಶ್ನೆ ಮಾಡಿದ್ದಾರೆ.
Two women on a motorcycle crashed through the roof of a house in Indonesia at high speed, losing their brakes and getting away with a slight fright. pic.twitter.com/gXIPRKul3l
— M e d i a s e t * S * (@MediasetS1) March 12, 2024