ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ನದಿಗಳಲ್ಲಿ ವಿದ್ಯುತ್ ಬೋಟ್ ಪ್ರಯಾಣವನ್ನು ಪರಿಚಯಿಸುವ ದೊಡ್ಡ ಯೋಜನೆಯ ಭಾಗವಾಗಿ ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿರುವ ಎಲೆಕ್ಟ್ರಿಕ್ ಬೋಟ್‌ಗಳು ಈಗ ಅಯೋಧ್ಯೆಯತ್ತ ತೆರಳಲು ಸಜ್ಜಾಗುತ್ತಿವೆ!
ಈ ಬೋಟ್‌ಗಳನ್ನು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸರಯೂ ನದಿಯಲ್ಲಿ ಸಂಚರಿಸುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
ಇನ್‌ಲ್ಯಾಂಡ್ ವೆಸೆಲ್ಸ್ ಆಕ್ಟ್ 2021ರ ನಂತರ ಬಳಿಕ ಕೇರಳದಲ್ಲಿ ನೋಂದಣಿಯಾದ ಮೊದಲ ಎಲೆಕ್ಟ್ರಿಕ್ ದೋಣಿಗಳು ಎಂಬ ಹೆಗ್ಗಳಿಕೆಗೆ ಕೂಡಾ ಇವು ಪಾತ್ರವಾಗಿವೆ. ತಲಾ ಐವತ್ತು ಮಂದಿ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿರುವ ಈ ಬೋಟ್‌ಗಳನ್ನು ಕೊಡುಂಗಲ್ಲೂರು ಬಂದರು ಕಚೇರಿಯಲ್ಲಿ ಇವುಗಳನ್ನು ನೋಂದಾಯಿಸಲಾಗಿದೆ.