ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಬ್ರೆಡ್ ಪೀಸ್: ನಾಲ್ಕು
ತುಪ್ಪ: ಒಂದು ಚಮಚ
ಎಣ್ಣೆ: ಎರಡು ಚಮಚ
ಈರುಳ್ಳಿ: ಒಂದು
ಟೊಮೆಟೊ: ಒಂದು
ಹಸಿಮೆಣಸಿನಕಾಯಿ: ಎರಡು
ಗೋಡಂಬಿ: ಹತ್ತು
ಜೀರಿಗೆ, ಸಾಸಿವೆ: ಅರ್ಧ ಚಮಚ
ಶುಂಠಿ: ಸ್ವಲ್ಪ
ಕರಿಬೇವಿನ ಎಲೆ: ಒಂದು ಕಡ್ಡಿ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಖಾರದ ಪುಡಿ: ಅರ್ಧ ಟೀಚಮಚ
ಸಾಂಬಾರ್ ಪುಡಿ: ಅರ್ಧ ಟೀಚಮಚ
ಉಪ್ಪು: ಸಾಕಷ್ಟು
ಅರಿಶಿನ: ಕಾಲು ಟೀಚಮಚ
ಮಾಡುವ ವಿಧಾನ:
ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ. ಅದು ಬಿಸಿಯಾದ ನಂತರ, ಬ್ರೆಡ್ ತುಂಡುಗಳನ್ನು ಸೇರಿಸಿ ಎರಡೂ ಬದಿ ಫ್ರೈ ಮಾಡಿ. ಹೊರತೆಗೆದ ಬ್ರೆಡ್ ಅನ್ನು ಎರಡು ಇಂಚಿನ ತುಂಡುಗಳಾಗಿ ಕತ್ತರಿಸಿ. ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಬಿಸಿಯಾದ ಮೇಲೆ ಜೀರಿಗೆ, ಸಾಸಿವೆ, ಗೋಡಂಬಿ, ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಹಾಕಿ. ಕತ್ತರಿಸಿದ ಟೊಮೆಟೊ ಹಾಕಿ ಸ್ವಲ್ಪ ಮೆತ್ತಗಾಗುವರೆಗೆ ಬಾಡಿಸಿ. ಖಾರ, ಉಪ್ಪು, ಸಾಂಬಾರ್ ಪುಡಿ ಮತ್ತು ಅರಿಶಿನ ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ ಮತ್ತು ಕಡಿಮೆ ಉರಿಯಲ್ಲಿ ಎರಡು ನಿಮಿಷಗಳ ಕಾಲ ಮಸಾಲಾ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಬ್ರೆಡ್ ತುಂಡುಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ನೀರು ಚಿಮುಕಿಸಿ ಮತ್ತೆ ಮಿಶ್ರಣ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಬಿಸಿ ಬಿಸಿ ಬ್ರೆಡ್ ಉಪ್ಮಾ ತಯಾರಿಸಿ.