ಸಿನಿಮಾಗಳಿಗೆ ಬ್ರೇಕ್: ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾ ಹೊರಟ ನಟಿ ಸಮಂತಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಲವು ದಿನಗಳಿಂದ ಅನಾರೋಗ್ಯದಿಂದ ಮಂಕಾಗಿದ್ದ ನಟಿ ಸಮಂತಾ (Samantha) ಸದ್ಯ ಒಪ್ಪಿಕೊಂಡ ಸಿನಿಮಾಗಳನ್ನ ಮುಗಿಸಿದ್ದು, ಇದೀಗ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ (America) ಹಾರಿದ್ದಾರೆ.

ತಮ್ಮ ಆರೋಗ್ಯ ಸುಧಾರಣೆಗೆ ಹೊಸ ಮಾದರಿಯ ಥೆರಪಿಯೊಂದನ್ನ ಮಾಡಿಸುತ್ತಿದ್ದಾರೆ. ಇದು ಆಮ್ಲಜನಕ ಥೆರಪಿಯಾಗಿದ್ದು, ಇದರ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಅದಕ್ಕೂ ಮುನ್ನ ಫ್ರೆಂಡ್ಸ್ ಜೊತೆ ಡಿನ್ನರ್ ಪಾರ್ಟಿ (dinner party) ಮಾಡಿರುವ ಸಮಂತಾ, ಆನಂತರ ಅಮೆರಿಕಾ ವಿಮಾನ ಏರಿದ್ದಾರೆ.

ನಾಗಚೈತನ್ಯ (NagaChaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆಯನ್ನ ನಟಿ ಎದುರಿಸುತ್ತಿದ್ದರು. ಹಾಗಾಗಿ ಸಿನಿಮಾಗೆ ಕೊಂಚ ಬ್ರೇಕ್ ನೀಡಿ, ತಮ್ಮ ಹೆಲ್ತ್ ಕಡೆ ನಟಿ ಗಮನ ಕೊಡ್ತಿದ್ದಾರೆ.

ಹೆಚ್‌ಬಿಓಟಿ ಹೆಸರಿನ ಚಿಕಿತ್ಸೆಯನ್ನು ಸ್ಯಾಮ್ ಪಡೆದುಕೊಳ್ಳುತ್ತಿದ್ದಾರೆ. ಹೆಚ್‌ಬಿಓಟಿ ಎಂದರೆ ಹೈಪರ್‌ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ. ಈ ಚಿಕಿತ್ಸೆಯಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ವಾಸಿಯಾಗಲು ಪ್ರಾರಂಭವಾಗುತ್ತವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!