ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿ ನಿಗದಿಪಡಿಸಿ ಹಾಗೂ ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಧಿಸೂಚನೆ ಹೊರಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಉಂಟಾಗುತ್ತಿದ್ದ ಅಪಘಾತಗಳಿಗೆ ಈ ರಸ್ತೆಗಳಲ್ಲಿ ಚಲಿಸುವ ವಾಹನ ಸವಾರರು ಹಾಗೂ ಚಾಲಕರ ನಿರ್ಲಕ್ಷ್ಯತೆ, ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಗೊಳಿಸಿ ಹಾಗೂ ಪ್ರತಿ ದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ವ್ಯವಸ್ಥೆಯನ್ನು ಆ.2 ರಿಂದ ಜಾರಿಗೆ ತರಲಾಗಿದ್ದು, ವಿವಿದ ಮಾದರಿಯ ವಾಹನಗಳಿಗೆ ನಿಗದಿಗೊಳಿಸಿರುವ ವೇಗದ ಮಿತಿಯ ವಿವರ ಈ ಕೆಳಕಂಡಂತಿದೆ.
ವಾಹನವಾರು ನಿಗದಿಗೊಳಿಸಿರುವ ವೇಗದ ಮಿತಿಯ ವಿವರ
1. ವಾಹನ ಚಾಲಕನೂ ಸೇರಿ 8ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ (ಎಂ-1 ವರ್ಗದ ವಾಹನಗಳು) 120 kmph
2. ವಾಹನ ಚಾಲಕನೂ ಸೇರಿ 9 ಕ್ಕಿಂತ ಹೆಚ್ಚು. ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ (ಎಂ-2 & ಎಂ-3 ವರ್ಗದ ವಾಹನಗಳು) 100 kmph
3. ಗೂಡ್ಸ್ ವಾಹನಗಳು (ಎನ್ ವರ್ಗದ ವಾಹನಗಳು) 80 kmph
4. ದ್ವಿಚಕ್ರ ವಾಹನಗಳು 80 kmph
ಬೆಂಗಳೂರು ನಗರ ವ್ಯಾಪ್ತಿಯ ಸಂಚಾರ ಪಶ್ಚಿಮ ವಿಭಾಗದ ಕೆಂಗೇರಿ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ ಮತ್ತು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳ ಒಟ್ಟು 23.5 ವ್ಯಾಪ್ತಿಯನ್ನು ಹಾಗೂ ಸಂಚಾರ ದಕ್ಷಿಣ ವಿಭಾಗದ ತಲಘಟಪುರ, 6. ಕೆ.ಎಸ್.ಲೇಔಟ್, ಹುಳಿಮಾವು ಹಾಗೂ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಒಟ್ಟು 21 ಕಿ.ಮೀಗಳನ್ನು ನೈಸ್ ರಸ್ತೆಯು ಒಳಗೊಂಡಿರುತ್ತದೆ. ಈ ರಸ್ತೆಗಳಲ್ಲಿ ವಾಹನ ಚಾಲಕರು, ಸವಾರರ ಮತ್ತು ನಿರ್ಲಕ್ಷ್ಯತೆಯ ಚಾಲನೆಯಿಂದ ಮಾರಣಾಂತಿಕ, ಮಾರಣಾಂತಿಕವಲ್ಲದ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರತಿ ವರ್ಷವೂ ಅಪಘಾತದಲ್ಲಿ ಗಾಯಗೊಂಡು, ಮರಣಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನೈಸ್ ರಸ್ತೆಯಲ್ಲಿ ವೇಗ ಮಿತಿ ಎಚ್ಚರಿಕೆಯ ಬೋರ್ಡ್ಗಳು ಹಾಗೂ ಸೂಚಿಸುವ ಎಲ್.ಇ.ಡಿ. ಫಲಕಗಳು ಇರುತ್ತವೆ. ಈ ಎಲ್ಲಾ ಕ್ರಮಗಳನ್ನು ಅನುಸರಿಸಿಯೂ ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಇದರಿಂದಾಗಿ, ಪ್ರಯಾಣಿಕರ ಹಾಗೂ ವಾಹನ ಸವಾರರ ಸಾವು-ನೋವು ಹೆಚ್ಚಾಗುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ನೈಸ್ ರಸ್ತೆಯಲ್ಲಿ ಉಂಟಾಗಿರುವ ಅಪಘಾತಗಳ ಅಂಕಿಅಂಶಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
2022:
ಮಾರಣಾಂತಿಕ ಅಫಘಾತಗಳ ಸಂಖ್ಯೆ: 42
ಮಾರಣಾಂತಿಕವಲ್ಲದ ಅಫಘಾತಗಳ: 69
2023:
ಮಾರಣಾಂತಿಕ ಅಫಘಾತಗಳ ಸಂಖ್ಯೆ: 37
ಮಾರಣಾಂತಿಕವಲ್ಲದ ಅಫಘಾತಗಳ: 83
2024ರ ಜೂನ್ವರೆಗೆ
ಮಾರಣಾಂತಿಕ ಅಫಘಾತಗಳ ಸಂಖ್ಯೆ:13
ಮಾರಣಾಂತಿಕವಲ್ಲದ ಅಫಘಾತಗಳ:52