ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ವಿಪರೀತವಾಗಿ ಏರಿ ಜನರನ್ನು ಬೆಚ್ಚಿಬೀಳಿಸಿದ್ದ ಬೆಳ್ಳಿ ಬೆಲೆ ಕೊನೆಗೂ ಠುಸ್ ಎಂದಿದೆ. ಅಸಹಜವಾಗಿ ₹190 ರ ಗಡಿ ದಾಟಿದ್ದ ಬೆಳ್ಳಿ, ಈಗ ₹172 ರೂಪಾಯಿಗೆ ಇಳಿಕೆ ಕಂಡಿದೆ. ಇದು ಗ್ರಾಹಕರಿಗೆ ಒಂದಷ್ಟು ಸಮಾಧಾನ ತಂದಿದೆ.
ಇನ್ನು, ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹೊತ್ತಿನಲ್ಲೇ ಚಿನ್ನದ ಬೆಲೆಯೂ ಕೊಂಚ ಮಟ್ಟಿಗೆ ತಣ್ಣಗಾಗಿದೆ. 22 ಕ್ಯಾರಟ್ ಚಿನ್ನದ ದರವು ₹12,000 ರೂಪಾಯಿ ಗಡಿಗಿಂತ ಕೆಳಗೆ ಇಳಿದಿದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆಯೂ ₹13,000 ರೂಪಾಯಿ ಗಡಿಗಿಂತ ಕೆಳಗಿಳಿಯಲು ಇನ್ನೊಂದು ಸಣ್ಣ ಇಳಿಕೆ ಸಾಕಾಗಬಹುದು.
ಸದ್ಯ ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,19,800 ರೂಪಾಯಿ ಇದೆ. ಅದೇ ರೀತಿ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ ₹1,30,690 ರೂಪಾಯಿ ಆಗಿದ್ದು, ಇದು ಕೂಡ ಸದ್ಯದ ಮಟ್ಟಿಗೆ ಗಣನೀಯ ಇಳಿಕೆಯಾಗಿದೆ. 100 ಗ್ರಾಮ್ ಬೆಳ್ಳಿ ಬೆಲೆ ₹17,200 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ ₹1,19,800 ರೂಪಾಯಿ ಆಗಿದ್ದರೆ, ಬೆಳ್ಳಿ ಬೆಲೆ (100 ಗ್ರಾಮ್‌ಗೆ) ₹17,990 ರೂಪಾಯಿಯಲ್ಲಿದೆ. ತಮಿಳುನಾಡು, ಕೇರಳದಂತಹ ಕೆಲವೆಡೆ ಬೆಳ್ಳಿ ದರ ₹19,000 ರೂಪಾಯಿ ಮಟ್ಟದಲ್ಲಿ ಇದೆ.
ಲೋಹ (ಕ್ಯಾರಟ್),ಬೆಲೆ (ರೂಪಾಯಿ)
24 ಕ್ಯಾರಟ್ ಚಿನ್ನ,”13,069″
22 ಕ್ಯಾರಟ್ ಚಿನ್ನ,”11,980″
18 ಕ್ಯಾರಟ್ ಚಿನ್ನ,”9,802″
ಬೆಳ್ಳಿ,172
ನಗರ,ಬೆಲೆ (ರೂಪಾಯಿ)
ಬೆಂಗಳೂರು,”11,980″
ಮುಂಬೈ,”11,980″
ಕೋಲ್ಕತಾ,”11,980″
ಕೇರಳ,”11,980″
ಚೆನ್ನೈ,”11,920″
ದೆಹಲಿ,”11,995″
ಜೈಪುರ್,”11,995″