September 28, 2026
Monday, September 28, 2026
spot_img

ಇರಾನ್ ದಾಳಿಯ ವಿಡಿಯೋ ಹಂಚಿಕೊಂಡರೆ 50 ಲಕ್ಷ ರೂ. ದಂಡ: ದುಬೈ ಸರ್ಕಾರದಿಂದ ಕಟ್ಟುನಿಟ್ಟಿನ ಎಚ್ಚರಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದ ಎಂಟುಕ್ಕೂ ಹೆಚ್ಚು ದೇಶಗಳ ಮೇಲೆ ದಾಳಿ ಮಾಡಿತು. ದುಬೈ ಮತ್ತು ಅಬುಧಾಬಿಯಲ್ಲಿ ಸ್ಫೋಟಗಳು ಸಂಭವಿಸಿದೆ.

ಇದರ ಬೆನ್ನಲ್ಲೇ ದಾಳಿಯ ದೃಶ್ಯಗಳು, ವಿಡಿಯೊಗಳು ಅಥವಾ ‘ರೀಲ್ಸ್’ಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಬರೋಬ್ಬರಿ ಸುಮಾರು 50 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ದುಬೈ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಪ್ರಸ್ತುತ ಬುರ್ಜ್ ಅಲ್ ಅರಬ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆದ ಡ್ರೋನ್ ದಾಳಿಯ ಭಯಾನಕ ವಿಡಿಯೊಗಳು ವೈರಲ್ ಆದರೆ, ಪ್ರವಾಸಿಗರು ಹಾಗೂ ಜಾಗತಿಕ ಹೂಡಿಕೆದಾರರು ಹಿಂದೇಟು ಹಾಕಬಹುದು ಎಂಬುದು ಸರ್ಕಾರದ ಆತಂಕವಾಗಿದೆ.

ಭವಿಷ್ಯದ ಆರ್ಥಿಕ ಭದ್ರತೆಗಾಗಿ ದುಬೈ ಕೋಟ್ಯಂತರ ಡಾಲರ್ ಹೂಡಿಕೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ತಾನೊಂದು ಅತ್ಯಂತ ‘ಸುರಕ್ಷಿತ ತಾಣ’ ಎಂಬ ಹೆಗ್ಗಳಿಕೆ ಹೊಂದಿದೆ. ಈ ಕಾರಣಕ್ಕೆ ಯುಎಇಯ ಕಠಿಣ ಸೈಬರ್ ಭದ್ರತಾ ಕಾನೂನುಗಳ ಅಡಿಯಲ್ಲಿ ಇಂತಹ ವಿಡಿಯೊಗಳ ಪ್ರಸಾರಕ್ಕೆ ಕಡಿವಾಣ ಹಾಕಲಾಗಿದೆ.

Must Read