ಥಾಯ್ಲೆಂಡ್–ಕಾಂಬೋಡಿಯಾ ಗಡಿ ಸಂಘರ್ಷಕ್ಕೆ ಬ್ರೇಕ್: ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲ ದಿನಗಳಿಂದ ತೀವ್ರಗೊಂಡಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ಸಂಘರ್ಷ ಕೊನೆ ಕಂಡಿದೆ. ಶನಿವಾರ ತಡರಾತ್ರಿ ಥಾಯ್ಲೆಂಡ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಘೋಷಿಸಿದ್ದು, ಈ ನಿರ್ಧಾರಕ್ಕೆ ಕಾಂಬೋಡಿಯಾ ಸಹ ಸ್ಪಂದಿಸಿದೆ.

ಭಾನುವಾರ ಪ್ರಕಟಣೆಯಲ್ಲಿ ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ಅವರು, “ಥಾಯ್ಲೆಂಡ್ ಜನರೊಂದಿಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಸಿದ್ಧರಾಗಿದ್ದೇವೆ. ಈ ಸಂಬಂಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತುಕತೆ ನಡೆಸಲಾಗುತ್ತದೆ” ಎಂದರು. ಜೊತೆಗೆ, ಯಾವುದೇ ಶಾಂತಿ ಒಪ್ಪಂದವನ್ನ ತಾವು ರದ್ದುಗೊಳಿಸದಂತೆ ಥಾಯ್ಲೆಂಡಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಗಡಿ ಸಂಘರ್ಷಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು, ಟ್ರೂತ್ ಸೋಷಿಯಲ್ ಮಾಧ್ಯಮದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಾಯಕರೊಂದಿಗೆ ಮಾತನಾಡಿದ್ದೇನೆ. ಯುದ್ಧ ನಿಲ್ಲದ ತನಕ ವ್ಯಾಪಾರ ಒಪ್ಪಂದವಿಲ್ಲ ಎಂದು ಸೂಚಿಸಿದ್ದೆ. ಶೀಘ್ರವೇ ಕದನ ವಿರಾಮಕ್ಕೆ ಒಪ್ಪಿಸಿದ್ದಾರೆ” ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದರು.

ಈ ಗಡಿ ಸಂಘರ್ಷ ಹಿಂದು ದೇಗುಲ ವಿವಾದದಿಂದ ಹುಟ್ಟಿಕೊಂಡಿದ್ದು, ಇದುವರೆಗೆ 33 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕೆಯ ಅಗತ್ಯವಿತ್ತು. ಈಗ ಕದನ ವಿರಾಮದ ಘೋಷಣೆಯೊಂದಿಗೆ ಗಡಿ ಭಾಗದಲ್ಲಿ ಶಾಂತಿ ಮರಳುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!