October 7, 2026
Wednesday, October 7, 2026
spot_img

ಸತತ ಮೂರು ದಿನಗಳ ಏರಿಕೆಗೆ ಬ್ರೇಕ್: ಬಜೆಟ್ ದಿನವೇ ಹಳ್ಳ ಹಿಡಿದ ನಿಫ್ಟಿ, ಸೆನ್ಸೆಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಜೆಟ್ 2026 ಸಂಸತ್ತಿನಲ್ಲಿ ಮಂಡನೆಯಾಗುವ ಮೊದಲೇ ದೇಶದ ಷೇರು ಮಾರುಕಟ್ಟೆಗಳು ಅಸ್ಥಿರತೆಗೆ ಸಾಕ್ಷಿಯಾಗಿವೆ. ಕಳೆದ ಮೂರು ದಿನಗಳಿಂದ ಕಂಡುಬಂದಿದ್ದ ಏರಿಕೆಯ ಹಾದಿಗೆ ಬೆಳಿಗ್ಗೆ ದಿಢೀರ್ ತಡೆ ಬಿದ್ದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 619.06 ಅಂಕಗಳಷ್ಟು ಕುಸಿತ ಕಂಡು 81,947.31 ಮಟ್ಟಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 171.35 ಅಂಕಗಳ ನಷ್ಟದೊಂದಿಗೆ 25,247.55 ಕ್ಕೆ ಇಳಿಕೆಯಾಗಿದೆ. ಬಜೆಟ್ ಘೋಷಣೆಗಳ ನಿರೀಕ್ಷೆ ಮತ್ತು ಮಾರುಕಟ್ಟೆಯ ಚಂಚಲತೆಯಿಂದಾಗಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ.

Must Read