ಹೊಸದಿಗಂತ ವರದಿ,ಬಂಟ್ವಾಳ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಇರ್ವತ್ತೂರು ಪದವು ಪರಿಸರದ ಬಾರೊಂದರಲ್ಲಿ ದಾಂಧಲೆ ನಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಪ್ರಾಥಮಿಕ ಮಾಹಿತಿ ಗಳ ಪ್ರಕಾರ ಇಲ್ಲಿನ ಪ್ರಕಾಶ್ ಬಾರ್ ನಲ್ಲಿ ಘಟನೆ ಸಂಭವಿಸಿದೆ.
ಬಂಟ್ವಾಳದ ಇಬ್ಬರು ಪಾನಮತ್ತರಾಗಿ ಹೊರಗಡೆ ಹೋಗಿ ಮರಳಿ ಬಂದು ಬಾರನ್ನು ಪುಡಿಗಟ್ಟಿ ಹೋಗಿದ್ದಾರೆ. ಅಲ್ಲದೆ ಬಾರ್ ನ ಅಡುಗೆಯವರು, ಸಿಬ್ಬಂದಿ ಹಾಗೂ ಮಾಲಕರನ್ನು ಥಳಿಸಿದ್ದಾರೆ ಎಂದು ಬಾರ್ ಸಿಬ್ಬಂದಿ ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.