BREAKING NEWS | ಕೋವಿಡ್ -19 ರ ಎಕ್ಸ್‌ಇ ರೂಪಾಂತರ ಭಾರತಕ್ಕೆ ಅಧಿಕೃತ ಲಗ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತದಲ್ಲಿ ಕೋವಿಡ್ -19 ರ ಎಕ್ಸ್‌ಇ ರೂಪಾಂತರದ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ. ಇದು ದೇಶದಲ್ಲೇ ಕಂಡುಬಂದಿರುವ ಮೊದಲ ಪ್ರಕರಣವಾಗಿದೆ.
ಯುಕೆಯಲ್ಲಿ ತಲ್ಲಣವನ್ನೇ ಸೃಷ್ಠಿಸಿರುವ ಒಮಿಕ್ರಾನ್ ಎಕ್ಸ್ ಇ ರೂಪಾಂತರಿ ತಳಿ ಇದೀಗ ಭಾರತಕ್ಕೆ ಎಂಟ್ರಿ ಪಡೆದಿದೆ.
ಈ ಕುರಿತಂತೆ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕೋವಿಡ್ ರೂಪಾಂತರಿ ಪರೀಕ್ಷೆಗೆ ಒಳಪಡಿಸಲಾದ ರೋಗಿಯೊಬ್ಬರಲ್ಲಿ ಎಕ್ಸ್ ಇ ರೂಪಾಂತರಿ ಸೋಂಕು ದೃಢಪಟ್ಟಿದೆ. ಇನ್ನೊಬ್ಬ ರೋಗಿಗೆ ಕೋವಿಡ್ 19ರ ಕಪಾ ರೂಪಾಂತರದಿಂದ ಭಾಧಿತನಾಗಿದ್ದಾರೆ ಎಂಬುದಾಗಿ ತಿಳಿಸಿದೆ.
ಈಗಾಗಲೇ ಕೋವಿಡ್‌ನ ಒಂದು, ಎರಡು 3ನೇ ಅಲೆಗಳಲ್ಲಿ ಭಾರತ ಸೇರಿದಂತೆ ಪ್ರಪಂಚ ತತ್ತರಿಸಿದ್ದು, 4ನೇ ಅಲೆ ಜೂನ್‌ನಲ್ಲಿ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!