October 18, 2026
Sunday, October 18, 2026
spot_img

ಉಸಿರಾಟಕ್ಕೂ ಸಂಚಕಾರ: ಕುಸಿಯುತ್ತಿದೆ ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಕರ್ನಾಟಕದ ಪ್ರಮುಖ ನಗರಗಳ ವಾಯು ಗುಣಮಟ್ಟ ಸೂಚ್ಯಂಕ ಇಂದು ಮತ್ತಷ್ಟು ಕುಸಿದಿದೆ. ನಿನ್ನೆ ಸುಧಾರಣೆಯ ಹಾದಿಯಲ್ಲಿದ್ದ ಮಂಗಳೂರಿನ ಗಾಳಿ ಇಂದು ಮತ್ತೆ ಕಲುಷಿತಗೊಂಡಿದ್ದು, ಕರಾವಳಿ ಜನತೆಯಲ್ಲಿ ಆತಂಕ ಮೂಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಈ ನಗರಗಳಲ್ಲಿ ದಾಖಲಾಗಿರುವ ಗಾಳಿಯ ಗುಣಮಟ್ಟವು ಶ್ವಾಸಕೋಶ ಮತ್ತು ಹಿರಿಯ ನಾಗರಿಕರ ಆರೋಗ್ಯಕ್ಕೆ ಹಾನಿಕರವಾಗಿದೆ.

ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

Must Read