ಹೊಸದಿಗಂತ ವರದಿ,ಶಿವಮೊಗ್ಗ:
ಕೋಳಿ ಅಂಗಡಿ ನಡೆಸಲು ಮಾಲೀಕನಿಂದ 50,000 ರೂ. ಲಂಚ ಪಡೆಯುವ ವೇಳೆ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ ನನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಜೋಗದ ಬಜಾರ್ ಕೋಳಿ ಅಂಗಡಿ ಮಾಲಿಕ ಅಹಮದ್ ಬಾಕಿ ಲೈಸೆನ್ಸ್ ಹೊಂದಿರದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯು ಅಂಗಡಿ ಮುಚ್ಚುವಂತೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿತ್ತು.
ಆಗ ಮಾಲೀಕ ಅದೇ ವಾರ್ಡ್ ನ ಪಪಂ ಸದಸ್ಯ ಹರೀಶ್ ಅವರುನ್ನು ಸಂಪರ್ಕಿಸಿದ್ದರು.
ಸಮಸ್ಯೆಯನ್ನು ಬಗೆಹರಿಸಲು 50,000 ರೂ ಲಂಚ ಕೇಳಿದ್ದರು. ಆಗ ಅಂಗಡಿ ಮಾಲೀಕ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ ಕೆ ಸಿ ಹರೀಶ್ ಅಹಮದ್ ಬಾಕಿಯಿಂದ ಹಣ ಪಡೆಯುವಾಗಲೇ ಆರೋಪಿಯನ್ನು ಬಂಧಿಸಿದರು. ಪೊಲೀಸರು ದಾಳಿ ನಡೆಸಿದ ತಕ್ಷಣ ಆರೋಪಿ 50,000ಗಳನ್ನು ಸುಟ್ಟುಹಾಕಲು ಯತ್ನಿಸಿದ್ದಾನೆ.
ಚಿತ್ರದುರ್ಗ ಲೋಕಾಯುಕ್ತ ಎಸ್ ಪಿ ವಾಸುದೇವ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಡಿಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದಾರೆ.