ಹೊಸದಿಗಂತ ವರದಿ,ಹಾವೇರಿ:
ರಾಣೆಬೆನ್ನೂರ ತಾಲೂಕಿನ ಗಂಗಾಪುರದಿಂದ ನಗರದ ಶನೈಶ್ವರ ಮಠಕ್ಕೆ ಮಣ್ಣನ್ನು ಸಾಗಿಸುವಾಗ ಟಿಪ್ಪರ್ ಗಳನ್ನು ತಹಶೀಲ್ದಾರ ಹನುಮಂತ ಶಿರಹಟ್ಟಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಟಿಪ್ಪರ್ ಲಾರಿ ಡ್ರೈವರ್ ಗಳ ಮೊಬೈಲ್ ಹಾಗೂ ಗಾಡಿ ಕೀ ಕಸಿದು ತಲಾ 10ಸಾವಿರದಂತೆ ಎರಡೂ ವಾಹನಗಳಿಗೆ ಒಟ್ಟು ರೂ.20ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಾತುಕತೆ ನಡೆಸಿದ ದೂರುದಾರನೊಂದಿಗೆ ಚೌಕಾಸಿ ಮಾಡಿ ರೂ.12ಸಾವಿರಗಳಿಗೆ ಒಪ್ಪಿಕೊಂಡಿದ್ದರು.
ಅದರಂತೆ ಶುಕ್ರವಾರ ಟಿಪ್ಪರ್ ಡ್ರೈವರ್ ಮಾಲತೇಶ ಮಡಿವಾಳರ ಮೂಲಕ ಹಣ ಪಡೆಐವಾಗಲೇ ಲೋಕಾ ಬಲೆಗೆ ಬಿದ್ದಿದ್ದಾರೆ.
ಈ ಕುರಿತು ರಾಣೆಬೆನ್ನೂರಿನ ಮಂಜುನಾಥ ನಾಗಪ್ಪ ವಾಲೀಕಾರ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಮಾಡಿದ್ದು ಇರುತ್ತದೆ. ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಶ್ರೀ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಬಿ ಪಿ ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ತನಿಖಾಧಿಕಾರಿ ಆಂಜನೇಯ ಎನ್. ಎಚ್., ಮಂಜುನಾಥ ಪಂಡಿತ್ ಹಾಗೂ ಸಿಬ್ಬಂದಿಗಳಾದ ಸಿ. ಎಂ. ಬಾರ್ಕಿ, ಎಂ. ಕೆ. ನದಾಫ, ಟಿ. ಇ. ತಿರುಮಲೆ, ಬಿ.ಎಂ. ಕರ್ಜಗಿ, ಎಂ. ಕೆ. ಲಕ್ಷ್ಮೇಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಬಿ. ಎಸ್. ಸಂಕಣ್ಣನವರ, ಎನ್. ಬಿ. ಪಾಟೀಲ್, ಎ. ಜಿ. ಶೆಟ್ಟರ್, ಎಂ. ಸಿ. ಅರಸೀಕೆರೆ, ಎಂ. ಎಸ್. ಕೊಂಬಳಿ, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ರಾಣೆಬೆನ್ನೂರ ನಗರದ ವೀರಭದ್ರೇಶ್ವರ ಲೇಔಟ್ ನಲ್ಲಿ ರುವ ತಹಶೀಲ್ದಾರ ವಾಸ ಇರುವ ಬಾಡಿಗೆ ಮನೆಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.