ತಾಳಿ ಕಟ್ಟಲು ವರದಕ್ಷಿಣೆ ಬೇಡಿಕೆಯಿಟ್ಟ ವರನ ಚಳಿ ಬಿಡಿಸಿದ ವಧುವಿನ ಕುಟುಂಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಳಿ ಕಟ್ಟುವ ವೇಳೆ ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ ವರನನ್ನು ವಧುವಿನ ಮನೆಯವರು ಮರಕ್ಕೆ ಕಟ್ಟಿ ಹಾಕಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್ ಗಢದಲ್ಲಿ ನಡೆದಿದೆ. ಪೊಲೀಸರ ಪ್ರಕಾರ ಯುವ ಜೋಡಿಯ ಮದುವೆಗೆ ಎರಡೂ ಕುಟುಂಬಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಮದುವೆ ಸಮಾರಂಭಕ್ಕೆ ಇಬ್ಬರ ಸಂಬಂಧಿಕರು ಬಂದಿದ್ದರು.

ಇನ್ನು ಕೆಲವೇ ಕ್ಷಣಗಳಲ್ಲಿ ವರನು ವಧುವಿನ ಕೊರಳಿಗೆ ತಾಳಿ ಕಟ್ಟುವ ಸಮಯ ಬಂದಿದೆ. ಇದೇ ವೇಳೆ ವರ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ವಧುವಿನ ಕುಟುಂಬಸ್ಥರು ವರನ ಮನವೊಲಿಸಲು ಎಷ್ಟೇ ಯತ್ನಿಸಿದರೂ ಅವರ ಮಾತಿಗೆ ಕಿವಿಗೊಡದೆ ಹಠಕ್ಕೆ ಬಿದ್ದಿದ್ದಾನೆ. ಕೊನೆಗೆ ಬೇರೆ ದಾರಿಯಿಲ್ಲದೆ ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ.

ಅಲ್ಲದೆ ವರನ ಪರವಾಗಿ ಬಂದಿದ್ದ ಹಲವು ಅತಿಥಿಗಳಿಗೂ ಗೂಸಾ ಬಿದ್ದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದರು. ದಿನವಿಡೀ ಪಂಚಾಯಿತಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!