ಹೊಸದಿಗಂತ ವರದಿ,ಮಂಡ್ಯ :
ಕಾವೇರಿ ನದಿ ನೀರಿನ ಹರಿವು ಹೆಚ್ಚಿರುವುದರಿಂದಾಗಿ ಸೇತುವೆ ಮುಳುಗಡೆಯಾಗಿರುವ ಕಾರಣ ತುಂಬು ಗರ್ಭಿಣಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.
ಮಳವಳ್ಳಿ ತಾಲೂಕು ಮುತ್ತತ್ತಿ ಗ್ರಾಮದ ಅನು ಎಂಬ ತುಂಬು ಗರ್ಭಿಣಿಯನ್ನು ತಾಲೂಕು ಆಡಳಿತ ತೆಪ್ಪದ ಸಹಾಯದಿಂದ ಅವರ ತವರಿಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ರಾತ್ರಿ ವೇಳೆ ಅವರಿಗೆ ಹೊಟ್ಟೇನೋವು ಕಾಣಿಸಿಕೊಂಡಲ್ಲಿ ದ್ವೀಪದಂತಾಗಿರುವ ಮುತ್ತತ್ತಿ ಗ್ರಾಮದಿಂದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಆಶಾ ಕಾರ‌್ಯಕರ್ತೆಯಿಂದ ಮಾಹಿತಿ ಅರಿತ ತಹಸೀಲ್ದಾರ್ ಲೋಕೇಶ್ ಅವರು ಅನು ಅವರ ಮನವೊಲಿಸಿ ತವರಿಗೆ ಸೇರಿಸಿ ನಿಟ್ಟುಸಿರು ಬಿಟ್ಟಿದ್ದಾರೆ.