ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ(ಜ.25) ಯಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯದ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದೆ.
ಇತ್ತ ಇಂಗ್ಲೆಂಡ್ ತಂಡ ಭಾರತಕ್ಕೆ ಆಗಮಿಸಿದ್ದು, ಆದ್ರೆ ಪಾಕಿಸ್ತಾನ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಶೋಯೆಬ್ ಬಶೀರ್‌ಗೆ ತಂಡದಲ್ಲಿ ಸ್ಥಾನ ನೀಡಿತ್ತು. ಆದರೆಭಾರತ ಪ್ರವಾಸ ಮಾಡಲು ವೀಸಾ ಸಮಸ್ಯೆಯಾಗಿದೆ. ಹೀಗಾಗಿ ಅಬು ಧಾಬಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಶೋಯೆಬ್ ಬಶೀರ್ ವೀಸಾ ಸಮಸ್ಯೆಯಿಂದ ಇದೀಗ ಲಂಡನ್‌ಗೆ ಮರಳಿದ್ದಾರೆ.
ಇತ್ತ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗೆ ತೀವ್ರ ನಿರಾಸೆಯಾಗಿದ್ದರೆ, ಬ್ರಿಟನ್ ಪ್ರಧಾನಿ ರಿಶಿ ಸುನಕ್, ಭಾರತಕ್ಕೆ ವಿಶೇಷ ಮನವಿ ಮಾಡಿದ್ದು, ಶೋಯೆಬ್ ಬಶೀರ್‌ನನ್ನು ಇಂಗ್ಲೆಂಡಿಗ ಎಂದು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.
ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕ ಇಂಗ್ಲೆಂಡ್ ತಂಡ ಅಬುಧಾಬಿಯಲ್ಲಿ ಅಭ್ಯಾಸ ಮಾಡಿದೆ. ಸಂಪೂರ್ಣ ತಂಡ ಅಬುಧಾಬಿ ಪಿಚ್‌ನಲ್ಲಿ ಅಭ್ಯಾಸ ಮಾಡುವ ಮೂಲಕ ಭಾರತವನ್ನು ಮಣಿಸಲು ಭರ್ಜರಿ ಪ್ಲಾನ್ ಮಾಡಿತ್ತು. ಇತ್ತ ಭಾರತದ ಸ್ಪಿನ್ ಅಸ್ತ್ರಕ್ಕೆ ಪ್ರತಿಯಾಗಿ ಪಾಕಿಸ್ತಾನ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಶೋಯೆಬ್ ಬಶೀರ್‌ಗೆ ಸ್ಥಾನ ನೀಡಿತ್ತು.
ಭಾರತ ಪ್ರವಾಸದ ದಿನಾಂಕ ಆಗಮಿಸಿದರೂ ಪಾಕ್ ಮೂಲದ ಬಶೀರ್ ವೀಸಾ ಸಮಸ್ಯೆಯಾಗಿದೆ. ಇತರ ಇಂಗ್ಲೆಂಡ್ ಕ್ರಿಕೆಟಿಗರ ವೀಸಾ ಯಾವುದೇ ಸಮಸ್ಯೆ ಇಲ್ಲದೆ ಕೈಸೇರಿದೆ. ಆದರೆ ಬಶೀರ್ ಮಾತ್ರ ವೀಸಾ ಸಿಗದೆ ಅಬು ಧಾಬಿಯಿಂದ ಲಂಡನ್‌ಗೆ ಮರಳಿದ್ದಾನೆ. ಇತ್ತ ಇಂಗ್ಲೆಂಡ್ ತಂಡ ಭಾರತಕ್ಕೆ ಬಂದಿಳಿದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ಬೆನ್ ಸ್ಟೋಕ್ಸ್, ವೀಸಾ ಕಾರಣದಿಂದ ಪ್ರತಿಭಾನ್ವಿತ ಯುವ ಆಟಗಾರನಿಗೆ ಪ್ರವಾಸ ಮಾಡಲು ಸಾಧ್ಯವಾಗಿಲ್ಲ ಅನ್ನೋದು ತೀವ್ರ ಬೇಸರ ತಂದಿದೆ. ಯುವ ಕ್ರಿಕೆಟಿಗ, ತಂಡದ ಪ್ರಮುಖ ಸದಸ್ಯನ ಅನುಪಸ್ಥಿತಿ ಬೇಸರ ತಂದಿದೆ.ಪ್ರತಿ ಬಾರಿ ಈ ಘಟನೆಗಳು ಮರುಕಳಿಸಿದಾಗ ವ್ಯವಸ್ಛೆಯೇ ಬೇಸರ ತರಿಸುತ್ತದೆ ಎಂದು ಸ್ಟೋಕ್ಸ್ ಭಾರತದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಶೋಯೆಬ್ ಬಶೀರ್ ಮೂಲ ಪಾಕಿಸ್ತಾನ. ಆದರೆ ಬಶೀರ್ ಇಂಗ್ಲೆಂಡ್ ಪ್ರಜೆಯಾಗಿ ತಂಡದಲ್ಲಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗರನ್ನು ಸಮಾನದಿಂದ ಕಾಣಬೇಕು. ಕ್ರಿಕೆಟಿಗ ಬಶೀರ್‌ನನ್ನು ಇಂಗ್ಲೆಂಡ್ ಕ್ರಿಕೆಟಿಗ ಎಂದು ಪರಿಗಣಿಸಬೇಕು ಎಂದು ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಹೇಳಿದ್ದಾರೆ.