ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾಸ್ಟಾರ್ ಚಿರಂಜೀವಿ ರೀಲ್‌ನಲ್ಲಿ ಮಾತ್ರವಲ್ಲದೆ ರಿಯಲ್ ಜೀವನದಲ್ಲೂ ಅನೇಕರಿಗೆ ಸಹಾಯ ಹಸ್ತ ಚಾಚಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್ ಮೂಲಕ ಅಗತ್ಯವಿರುವವರಿಗೆ ರಕ್ತದಾನ ನಡೆಸಿ ಅದೆಷ್ಟೂ ಜೀವಗಳ ಉಳಿವಿಗೆ ಕಾರಣರಾಗಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್‌ನಲ್ಲಿ ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ರಕ್ತದಾನ ಮಾಡುತ್ತಾರೆ. ಇದೀಗ ತೆಲಂಗಾಣ ಮತ್ತು ಆಂಧ್ರಪ್ರದೇಶದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಗರೆಥ್ ವೈನ್ ಅವರು ಚಿರಂಜೀವಿ ಬ್ಲಡ್ ಬ್ಯಾಂಕ್‌ಗೆ ಭೇಟಿ ನೀಡಿ ರಕ್ತದಾನ ಮಾಡಿದರು.
ಚಿರಂಜೀವಿ ಬ್ಲಡ್ ಬ್ಯಾಂಕ್‌ಗೆ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಗರೆತ್ ವೈನಾನ್ ಅವರನ್ನು ಚಿರಂಜೀವಿ ಆಹ್ವಾನಿಸಿದ್ದಾರೆ. ಭೇಟಿ ನೀಡಿದ ಅತಿಥಿಗೆ ಚಿರಂಜೀವಿ ಅವರ ಸಹೋದರಿ ಮಾಧವಿ ರಕ್ತನಿಧಿ ಕೇಂದ್ರದ ವಿವರಗಳನ್ನು ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್‌ಗೆ ವಿವರಿಸಿದರು. ವಿಚಾರ ತಿಳಿದ ಬಳಿಕ ಗರೆಥ್ ವೈನ್ ರಕ್ತದಾನ ಮಾಡಿದ್ದಾರೆ.
ಅಲ್ಲದೆ, ಚಿರಂಜೀವಿ ಮತ್ತು ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಜಂಟಿಯಾಗಿ ಅತಿ ಹೆಚ್ಚು ಬಾರಿ ದಾನ ಮಾಡಿದ 25 ರಕ್ತದಾನಿಗಳಿಗೆ ಜೀವ ವಿಮೆ ಕಾರ್ಡ್‌ಗಳನ್ನು ನೀಡಿದರು. ಬಳಿಕ ಮಾತನಾಡಿದ ಚಿರಂಜೀವಿ ಈಗ ತುಂಬಾ ಖುಷಿಯಾಗಿದ್ದೇನೆ. ಇತ್ತೀಚೆಗೆ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಅವಾರ್ಡ್ ಸಿಕ್ಕಿದೆ. ಇಂದು ನಮ್ಮ ಬ್ಲಡ್ ಬ್ಯಾಂಕ್‌ಗೆ ಗರೆಥ್ ವೈನ್ ಬಂದಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಅಭಿಮಾನಿಗಳು ಇಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ 7 ಲಕ್ಷ ಜೀವ ವಿಮಾ ಕಾರ್ಡ್‌ಗಳನ್ನು ನೀಡಿದ್ದೇವೆ. ಎರಡನೇ ಹಂತದಲ್ಲಿ 1500 ರಕ್ತದಾನಿಗಳಿಗೆ ಜೀವ ವಿಮಾ ಕಾರ್ಡ್ ನೀಡುತ್ತಿದ್ದೇವೆ. ನನ್ನ ಅಭಿಮಾನಿಗಳು ಎಲ್ಲಿ ಇರುತ್ತಾರೋ ಅಲ್ಲೆಲ್ಲ ರಕ್ತನಿಧಿ ಇದ್ದೇ ಇರುತ್ತದೆ ಎಂದರು.