ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ಯುಕೆಗೆ ಟೇಕ್ ಆಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಂತ್ರಿಕ ದೋಷದಿಂದಾಗಿ ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ಯುಕೆಗೆ ಮರಳಿದೆ.

ಜೂನ್ 14 ರಂದು ಹೈಡ್ರಾಲಿಕ್ ಸಮಸ್ಯೆಯಿಂದ ಎಫ್​-35 ಯುದ್ಧ ವಿಮಾನ ತಿರುವನಂತಪುರಂ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಬಳಿಕ ಈ ಯುದ್ಧ ವಿಮಾನದ ಸಮಸ್ಯೆ ಪರಿಹರಿಸಲು ಬ್ರಿಟನ್​ನಿಂದ ಎಂಜಿನಿಯರ್​ಗಳ ತಂಡ ಆಗಮಿಸಿದ್ದರೂ ಟೇಕ್ ಆಫ್ ಸಾಧ್ಯವಾಗಿರಲಿಲ್ಲ. ಇದರಿಂದ ತಿಂಗಳಿಗೂ ಹೆಚ್ಚು ದಿನ ಯುದ್ಧ ವಿಮಾನ ಇಲ್ಲೇ ಉಳಿಯುವಂತಾಗಿತ್ತು. ಬಳಿಕ ನುರಿತ ತಜ್ಞರ ಮತ್ತೊಂದು ತಂಡ ಬ್ರಿಟನ್​ನಿಂದ ಆಗಮಿಸಿ, ಸಮಸ್ಯೆ ಪರಿಹರಿಸಿದೆ. ಇದರಿಂದಾಗಿ ಎಫ್​ 35 ಯುದ್ಧ ವಿಮಾನ ಇಂದು ಹಾರಾಟ ನಡೆಸಿದೆ.

ವಿಮಾನ ದುರಸ್ತಿಗಾಗಿ 25 ಬ್ರಿಟಿಷ್ ಎಂಜಿನಿಯರ್‌ಗಳ ತಂಡವು ಬ್ರಿಟಿಷ್ ರಾಯಲ್ ಏರ್ ಫೋರ್ಸ್‌ನ ವಿಮಾನದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಕೆಲ ದಿನಗಳ ರಿಪೇರಿ ಪ್ರಯತ್ನದ ನಂತರ ಎಫ್ -35 ರ ದೋಷ ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಬಳಿಕ ವಿಮಾನವು ವಿಮಾನವಾಹಕ ನೌಕೆಗೆ ಮರಳಿದೆ.

ಜೂನ್ 14 ರಂದು ತುರ್ತು ಲ್ಯಾಡಿಂಗ್ ಮಾಡಿದ್ದ ಯುಕೆ ಎಫ್ -35 ಬಿ ವಿಮಾನ ಇಂದು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಜುಲೈ 06 ರಿಂದ ಯುಕೆ ಎಂಜಿನಿಯರಿಂಗ್ ತಂಡವು ದುರಸ್ತಿ ಮಾಡಿ, ಸುರಕ್ಷತಾ ಪರಿಶೀಲನೆಗಳನ್ನು ಪೂರ್ಣಗೊಳಿಸಿದೆ. ಇದರಿಂದಾಗಿ ವಿಮಾನವು ಸಕ್ರಿಯ ಸೇವೆಯನ್ನು ಪುನಾರಾರಂಭಿಸಲು ಅವಕಾಶ ಮಾಡಿಕೊಟ್ಟಿತು. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭಾರತದ ಅಧಿಕಾರಿಗಳು ನೀಡಿದ ಸಹಾಯಕ್ಕೆ ಕೃತಜ್ಞರಾಗಿದ್ದೇವೆ. ಭಾರತದ ಜೊತೆ ರಕ್ಷಣಾ ಸಹಭಾಗಿತ್ವವನ್ನು ಇನ್ನಷ್ಟು ಬಲಿಷ್ಟಗೊಳಿಸಲು ನಾವು ಕಾತರರಾಗಿದ್ದೇವೆ ಎಂದು ಬ್ರಿಟಿಷ್ ಹೈಕಮಿಷನ್ ವಕ್ತಾರರು ತಿಳಿಸಿದ್ದಾರೆ.

ತಿರುವನಂತಪುರದಲ್ಲಿ ತುರ್ತು ಲ್ಯಾಂಡಿಂಗ್ ಆದ ಬ್ರಿಟಿಷ್ ನೌಕಾಪಡೆಯ F-35B, ವಿಶ್ವದ ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಈ ಯುದ್ಧ ವಿಮಾನ 110 ಮಿಲಿಯನ್​ ಡಾಲರ್​ ಮೌಲ್ಯವನ್ನು ಹೊಂದಿದೆ. ಎಫ್​ – 35 ಐದನೇ ತಲೆಮಾರಿನ ಫೈಟರ್​ ಜೆಟ್​ ಇದಾಗಿದೆ. ಬ್ರಿಟನ್​​ನ ಹೆಚ್​ಎಂಎಸ್​ ಪ್ರಿನ್ಸ್​ ಆಫ್​​ ವೇಲ್ಸ್​ ಕ್ಯಾರಿಯರ್​ ಸ್ಟ್ರೈಕ್​ ಗ್ರೂಪ್​​ಗೆ ಸೇರಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!