ಭಾರತ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದ ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ III

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡವನ್ನು ಸೇಂಟ್ ಜೇಮ್ಸ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ III ಅವರು ಭೇಟಿ ಮಾಡಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಸೇರಿದಂತೆ ಎಲ್ಲರನ್ನು ಮಾತನಾಡಿಸಿದ ಚಾರ್ಲ್ಸ್, ಆಟಗಾರರೊಂದಿಗೆ ತಮಾಷೆ ಮಾಡಿ ನಕ್ಕಿದ್ದಾರೆ. ಈ ವೇಳೆ ಕ್ರಿಕೆಟ್ ಬಗ್ಗೆಯೂ ಚರ್ಚಿಸಿದ್ದಾರೆ. ಕೊನೆಯಲ್ಲಿ ಭಾರತ ತಂಡದೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಪಂದ್ಯ (ಲಾರ್ಡ್ಸ್) ನಮ್ಮ ಪಾಲಿಗೆ ದುರದೃಷ್ಟಕರವಾಗಿತ್ತು ಎಂದು ನಾವು ಅವರಿಗೆ ಹೇಳಿದೆವು. ಮುಂದಿನ ಎರಡು ಪಂದ್ಯಗಳಲ್ಲಿ ಅದೃಷ್ಟ ನಿಮ್ಮದಾಗಲಿದೆ ಎಂದು ಅವರು ನಮಗೆ ಹೇಳಿದರು’ ಎಂದು ಗಿಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!