ಮದುವೆಯಾಗಲು ನಿರಾಕರಿಸಿದ ಸೊಸೆ ಮೇಲೆ ಆ್ಯಸಿಡ್ ಎರಚಿದ ಸೋದರ ಮಾವ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಾಗಲು ನಿರಾಕರಿಸುತ್ತಿದ್ದಾಳೆಂದು ಕೋಪಗೊಂಡ ಸೋದರ ಮಾವ, ಸೊಸೆ ಮೇಲೆಯೇ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಸೋದರ ಮಾವ ಆನಂದ್ ಕುಮಾರ್ ಈ ಕೃತ್ಯವೆಸಗಿದ್ದಾನೆ. ಅದೃಷ್ಟವಶಾತ್ ಅನಾಹುತದಿಂದ ಯುವತಿ ಪಾರಾಗಿದ್ದಾಳೆ. ಯುವತಿಗೆ ಆ್ಯಸಿಡ್ ಎರಚಿದ ಬಳಿಕ ಆನಂದ್ ಆಕೆಯ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಮಾವ ಆನಂದ್ ಕುಮಾರ್‌ಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಗಾಯಾಳು ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗಾಯಾಳು ಆನಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here