ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳನ್ನು ಕಾರ್‌ನಲ್ಲಿ ಆಟವಾಡೋಕೆ ಬಿಡೋದು, ಇಲ್ಲೇ ಹೋಗಿ ಬರೋಣ ಎಂದು ಐದು ನಿಮಿಷಕ್ಕಾದ್ರೂ ಮಕ್ಕಳನ್ನು ಕಾರ್‌ನಲ್ಲೇ ಬಿಟ್ಟು ಲಾಕ್ ಮಾಡುವ ಪೋಷಕರು ನೀವಾಗಿದ್ದರೆ ಈ ಸುದ್ದಿಯನ್ನು ಖಂಡಿತಾ ಓದಿ..
ಮಹಾರಾಷ್ಟ್ರದ ನಾಗ್‌ಪುರದ ಫಾರೂಕ್ ನಗರದಲ್ಲಿ ಕಾರ್‌ನೊಳಗೆ ಆಟವಾಡುತ್ತಾ ಲಾಕ್ ಆದ ಮೂವರು ಮಕ್ಕಳು ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾರೆ. ಮಕ್ಕಳು ಪಕ್ಕದ ಫೀಲ್ಡ್‌ನಲ್ಲಿ ಆಟ ಆಡ್ತಿದ್ದಾರೆ ಎಂದು ಪೋಷಕರು ಸುಮ್ಮನಿದ್ದಾರೆ, ಆದರೆ ಮಕ್ಕಳು ಮನೆಯ ಬಳಿಯೇ ಇದ್ದ ಹಳೇ ಕಾರ್‌ನೊಳಗೆ ಹೋಗಿದ್ದು, ಕಾರ್ ಲಾಕ್ ಆಗಿದೆ. ಇದನ್ನು ಯಾರೂ ಗಮನಿಸಿಲ್ಲ.
ಸಂಜೆ ವೇಳೆಗೂ ಆಲಿಯಾ, ತೌಫಿಕ್ ಹಾಗೂ ಅಫ್ರೀನ್ ಮನೆಗೆ ಬಾರದ ಕಾರಣ ಪೋಷಕರು ಕಿಡ್ನಾಪ್ ಆಗಿರುವುದಾಗಿ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿ ಮನೆಯ ಮುಂದಿದ್ದ ಕಾರ್‌ನ್ನು ಪರಿಶೀಲಿಸಿದಾಗ ಮಕ್ಕಳು ಮೃತಪಟ್ಟಿದ್ದು ತಿಳಿದುಬಂದಿದೆ. ಆಟವಾಡಲು ಹೋದ ಮಕ್ಕಳು ಮೃತಪಟ್ಟಿದ್ದು, ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.