ಬಿಆರ್‌ಎಸ್‌ ಸಮ್ಮೇಳನದಲ್ಲಿ ದುರಂತ: ಸಿಲಿಂಡರ್ ಸ್ಫೋಟದಿಂದ ರಕ್ತಸಿಕ್ತವಾಯ್ತು ಪ್ರದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖಮ್ಮಂ ಜಿಲ್ಲೆಯಲ್ಲಿ ನಡೆದ ಬಿಆರ್‌ಎಸ್ ಸಮ್ಮೇಳನದಲ್ಲಿ ದುರಂತ ಘಟನೆಯೊಂದು ನಡೆದಿದೆ. ಅಲ್ಲಿಯವರೆಗೆ ನಾಯಕರ ಆಗಮನದಿಂದ ಸಡಗರದಿಂದ ಕೂಡಿದ್ದ ಪ್ರದೇಶ ರಕ್ತಮಯವಾಗಿತ್ತು. ನಾಯಕರ ಆಗಮನವನ್ನು ಪಟಾಕಿ ಸಿಡಿಸಿ ಸ್ವಾಗತಿಸಲು ಸಿದ್ಧತೆ ನಡೆಸುತ್ತಿರುವಾಗ ಘಟನೆ ನಡೆದಿದೆ. ಪಟಾಕಿ ಸಿಡಿದು ಪಕ್ಕದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಗುಡಿಸಲಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಗೆ ಅಂಟಿಕೊಂಡಿದ್ದರಿಂದ ಸಿಲಿಂಡರ್ ಸ್ಫೋಟಗೊಂಡಿದ್ದು, ಇದರಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಖಮ್ಮಂ ಜಿಲ್ಲೆಯ ಕರೆಪಲ್ಲಿ ಮಂಡಲದ ಚೀಮಲಪಾಡು ಎಂಬಲ್ಲಿ ದುರಂತ ಸಂಭವಿಸಿದೆ. ಬಿಆರ್ಎಸ್ ಆಶ್ರಯದಲ್ಲಿ ಆಯೋಜಿಸಿದ್ದ ಕೂಟದಲ್ಲಿ ಈ ದುರ್ಘಟನೆ ನಡೆದಿದೆ. ಶಾಸಕ ರಾಮುಲುನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಎಲ್ಲ ಮುಖಂಡರು ಬಂದಿದ್ದರು. ಗ್ರಾಮಕ್ಕೆ ಮುಖಂಡರು ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದೇ ದುರಂತಕ್ಕೆ ಕಾರಣವಾಗಿದೆ.

ಬೆಂಕಿ ಕಾಣಿಸಿಕೊಂಡು ಒಳಗಿದ್ದ ವಾಹನಗಳು ಸುಟ್ಟು ಕರಕಲಾಗಿವೆ. ಅದೇ ಸಮಯದಲ್ಲಿ ನಿವಾಸದಲ್ಲಿದ್ದ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಸಿಲಿಂಡರ್ ಸ್ಫೋಟದಿಂದ ಸಮೀಪದ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದಿಂದ ಅನೇಕ ಜನರ ಕಾಲು ಮತ್ತು ಕೈಗಳು ತುಂಡಾಗಿವೆ. ಪೊಲೀಸರು ಹಾಗೂ ಪತ್ರಕರ್ತರಿಗೆ ಗಾಯಗಳಾಗಿದ್ದರೆ, ಕರ್ತವ್ಯದಲ್ಲಿದ್ದ ಸಿಐ ಸೇರಿದಂತೆ 10 ಮಂದಿಯ ಕಾಲು, ಕೈಗಳನ್ನು ತುಂಡರಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಇಡೀ ಪ್ರದೇಶ ದುಃಖದಿಂದ ಕೂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!