ಮೋದಿ ಭೇಟಿಗೆ ಬಿಆರ್‌ಎಸ್‌ ಕಿತಾಪತಿ: ಮೋದಿ ಹಠಾವೋ..ಸಿಂಗರೇಣಿ ಬಚಾವೋ ಘೋಷಣೆಯೊಂದಿಗೆ ಧರಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ಮೋದಿ ಹೈದರಾಬಾದ್ ಭೇಟಿ ಸಂದರ್ಭದಲ್ಲಿ ಸಿಂಗರೇಣಿ ಕಲ್ಲಿದ್ದಲು ಘಟಕಗಳ ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಲು ತೆಲಂಗಾಣ ಸರ್ಕಾರ ಸಜ್ಜಾಗಿದೆ. ಮೋದಿ ಹಠಾವೋ ಸಿಂಗರೇಣಿ ಬಚಾವೋ ಘೋಷಣೆಯೊಂದಿಗೆ ಬಿಆರ್‌ಎಸ್ ಧರಣಿ ಆಯೋಜಿಸುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಸಿಕಂದರಾಬಾದ್‌ಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಆರ್ ಎಸ್ ಗೋದಾವರಿ ಮುಖ್ಯ ಚೌಕದಲ್ಲಿ ಮೋದಿ ಹಟಾವೋ ಸಿಂಗರೇಣಿ ಬಚಾವೋ ಘೋಷಣೆಯೊಂದಿಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ  ಧರಣಿ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಆರ್ ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದಾರೆ.

ಸಿಂಗರೇಣಿಯಲ್ಲಿನ ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಹಾಕುವ ಕೇಂದ್ರದ ನಿರ್ಧಾರಕ್ಕೆ ತೆಲಂಗಾಣ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದರ ಭಾಗವಾಗಿ ಪ್ರಧಾನಿ ಮೋದಿ ಅವರ ಹೈದರಾಬಾದ್ ಭೇಟಿ ಸಂದರ್ಭದಲ್ಲಿ ಪ್ರತಿಭಟನೆ ವ್ಯಕ್ತಪಡಿಸಲು ಬಿಆರ್ ಎಸ್ ಪಕ್ಷ ನಿರ್ಧರಿಸಿದೆ. ರಾಮಗುಂಡಂ, ಮಂಚಿರ್ಯಾಲ, ಭೂಪಾಲಪಲ್ಲಿ, ಕೋತಗುಡೆಂನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಟಿಬಿಕೆಎಸ್ ಆಶ್ರಯದಲ್ಲಿ ಶ್ರೀರಾಂಪುರ ವ್ಯಾಪ್ತಿಯಲ್ಲಿನ ಎಲ್ಲಾ ಭೂಗತ ಗಣಿ ಮತ್ತು ತೆರೆದ ಕಾಸ್ಟ್‌ಗಳ ವಿರುದ್ಧ ಸಿಂಗರೇಣಿ ಕಾರ್ಮಿಕರು ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅದೇ ರೀತಿ ಕೋತಗುಡೆಂ ಮತ್ತು ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿ ಚೌಕದ ಬಳಿ ನಡೆದ ಮಹಾಧರಣಿಗಳಲ್ಲಿ ಸಚಿವರು, ಶಾಸಕರು ಕೂಡ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಲ್ಲಿದ್ದಲು ಗಣಿಗಳನ್ನು ಖಾಸಗೀಕರಣಗೊಳಿಸಿದರೆ ಸುಮ್ಮನಿರುವುದಿಲ್ಲ ಎಂದು ಸಿಂಗರೇಣಿ ಕಾರ್ಮಿಕರು ಕೇಂದ್ರದ ವಿರುದ್ಧ ಸೈರನ್‌ ಮೊಳಗಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here