ಬ್ರೂನೋ ಫೆರ್ನಾಂಡಿಸ್ ಅವಳಿ ಗೋಲುಗಳ ಮ್ಯಾಜಿಕ್: ಉರುಗ್ವೆ ಸೋಲಿಸಿ 16 ರ ಘಟ್ಟಕ್ಕೆ ಲಗ್ಗೆಯಿಟ್ಟ ಪೋರ್ಚುಗಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬ್ರೂನೋ ಫೆರ್ನಾಂಡಿಸ್ ಅವರು ದ್ವಿತೀಯಾರ್ಧದಲ್ಲಿ ಸಿಡಿಸಿದ ಅವಳಿ ಗೋಲುಗಲ ಬಲದಿಂದ ಪ್ರಬಲ ಉರುಗ್ವೆ ತಂಡವನ್ನು 2-0 ಗೋಲುಗಳ ಅಂತರದಿಂದ ಬಗ್ಗು ಬಡಿದ ಪೋರ್ಚುಗಲ್ ವಿಶ್ವಕಪ್‌ನ 16 ರ ಘಟ್ಟಕ್ಕೆ ಪ್ರವೇಶ ಪಡೆದಿದೆ. ಈಗಾಗಲೇ ಫ್ರಾನ್ಸ್ ಮತ್ತು ಬ್ರೆಜಿಲ್‌ ತಂಡಗಳು ಈ ಹಂತಕ್ಕೆ ಪ್ರೆವೇಶ ಪಡೆದಿದೆ.
ಪಂದ್ಯದ ಬಹುಪಾಲು ಸಮಯ ಪೋರ್ಚುಗಲ್ ಮೇಲುಗೈ ಸಾಧಿಸಿತ್ತು. ಪೊರ್ಚುಗೀಸರ ಆಕ್ರಮಣಕ್ಕಾರಿ ಆಟಕ್ಕೆ ಉರುಗ್ವೆ ಮಂಕಾಯಿತು. ಅದಾಗ್ಯೂ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿಯಾದ ಪೋರ್ಚುಗಲ್‌ 2 ಗೋಲು ದಾಖಲಿಸಿ ಭರ್ಜರಿ ಗೆಲುವು ಸಾಧಿಸಿತು.
ಪಂದ್ಯದ 54 ನಿಮಿಷ ಕ್ರಿಸ್ಟಿಯಾನೊ ರೊನಾಲ್ಡೊ ಗೋಲುಪೆಟ್ಟಿಗೆಯೊಳಕ್ಕೆ ತೇಲಿದಾಗ ಇಡೀ ಕ್ರೀಡಾಂಗಣವೇ ಹರ್ಷೋದ್ಘಾರದಲ್ಲಿ ತೇಲಿಹೋಯಿತು. ರೆಫರಿ ಈ ಗೋಲು ದಾಖಲಿಸಿದ್ದು ಬ್ರೂನೋ ಫೆರ್ನಾಂಡಿಸ್‌ ಎಂದಾಗ ರೊನಾಲ್ಡೋ ಸಹ ಒಂದು ಕ್ಷಣ ಅಚ್ಚರಿಗೊಂಡರು. ರಿಪ್ಲೆಯಲ್ಲಿ ಚೆಂಡು ಫೆರ್ನಾಂಡಿಸ್‌ ಪಾದ ಸವರಿಹೋಗಿದ್ದು ಸ್ಪಷ್ಟವಾಗಿತ್ತು. ಬಳಿಕ ರೊನಾಲ್ಡೋ ಫೆರ್ನಾಂಡಿಸ್‌ ರನ್ನು ತಬ್ಬಿಕೊಂಡು ಅಭಿನಂದಿಸಿದರು.
ಈ ಗೆಲುವಿನ ಮೂಲಕ ವಿಶ್ವಕಪ್‌ನಲ್ಲಿ ಇದು ಮೂರನೇ ಬಾರಿಗೆ ಪೋರ್ಚುಗಲ್ ಸತತ ಎರಡು ಗುಂಪು ಹಂತದ ಪಂದ್ಯಗಳನ್ನು ಗೆದ್ದುಕೊಂಡಿತು. ಪೋರ್ಚುಗಲ್‌ ಈ ಹಿಂದಿನ ಎರಡು ವಿಶ್ವಕಪ್‌ ಗಳಲ್ಲಿ ಸೆಮಿಫೈನಲ್‌ ನಲ್ಲಿ ಸೋಲುಂಡಿತ್ತು. ಉರುಗ್ವೆ 2018 ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್ನಲ್ಲಿ ನೀಡಿದ್ದ ಸೋಲಿನ ಶಾಕ್‌ ಗೆ  ಪೋರ್ಚುಗಲ್‌ ಸೇಡು ತೀರಿಸಿಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!