ಪಂಜಾಬ್ ಗಡಿಯಲ್ಲಿ 6 ಡ್ರೋನ್‌ ಹೊಡೆದುರುಳಿಸಿದ ಬಿಎಸ್​ಎಫ್: ಶಸ್ತ್ರಾಸ್ತ್ರಗಳು, ಹೆರಾಯಿನ್ ವಶ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

ಕಾರ್ಯಾಚರಣೆಯ ಸಮಯದಲ್ಲಿ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ರಾತ್ರಿ ಭಾರತ-ಪಾಕ್ ಗಡಿಯಲ್ಲಿರುವ ಅಮೃತಸರ ಜಿಲ್ಲೆಯ ಮೋಧೆ ಗ್ರಾಮದಲ್ಲಿ ತಾಂತ್ರಿಕ ಪ್ರತಿಕ್ರಮಗಳನ್ನು ಬಳಸಿಕೊಂಡು ಐದು ಡ್ರೋನ್‌ಗಳನ್ನು ಬಿಎಸ್​ಎಫ್​ ಹೊಡೆದುರುಳಿಸಿದೆ. ಮೂರು ಪಿಸ್ತೂಲ್​ ಗಳಿದ್ದ ನಾಲ್ಕು ಪ್ಯಾಕೆಟ್​ಗಳು, ಹಲವು ಮ್ಯಾಗಜೀನ್​ ಜೊತೆಗೆ 1.070 ಕೆ.ಜಿ ಹೆರಾಯಿನ್​ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಅಟ್ಟಾರಿ ಗ್ರಾಮದ ಬಳಿ ಮತ್ತೊಂದು ಡ್ರೋನ್ ತಟಸ್ಥಗೊಳಿಸಲಾಗಿದ್ದು​, ಎರಡು ಮ್ಯಾಗಜೀನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!