ಹೊಸದಿಗಂತ ವರದಿ ಮಂಗಳೂರು:
ಮಾಜಿ ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರುಶನ ಪಡೆದಿದ್ದು, ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ನಡೆಸಿದ್ದು, ನಾಣ್ಯಗಳಿಂದ ಸೇವೆ ನಡೆಸಿದ್ದಾರೆ. ಮಹಾಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿದ್ದಾರೆ.