ಬಿಟಿಡಿಎ: ಸಭಾಪತಿ ಸ್ಥಾನ ಅಧಿಕಾರ ಸ್ವೀಕರಿಸಿದ ಶಾಸಕ ಮೇಟಿ

ಹೊಸದಿಗಂತ ವರದಿ ಬೆಂಗಳೂರು:

ಬಿಟಿಡಿಎ ಕಚೇರಿಯಲ್ಲಿ ಶಾಸಕ ಎಚ್.ವೈ.ಮೇಟಿ ಅವರು ಬಿಟಿಡಿಎ ಸಭಾಪತಿ‌ ಸ್ಥಾನವನ್ನು ಸಹಿ ಮಾಡುವ ಮೂಲಕ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಬಿಟಿಡಿಎ ಆವರಣದಲ್ಲಿ ನಡೆದ ವೇದಿಕೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿ ಶಾಸಕರು ಮಾತನಾಡಿ, ಬಿಟಿಡಿಎ ವತಿಯಿಂದ‌ ಆಗಬೇಕಾದ ಅಭಿವೃದ್ಧಿ ಕಾಮಗಾರಿ‌ ತೀವ್ರಗತಿಯಲ್ಲಿ ಆಗಲು ಒತ್ತು ನೀಡಲಾಗುವುದು ಎಂದರು.

ಮೂರನೇ ಯುನಿಟ್ ದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅಧ್ಯತೆ ನೀಡಲಾಗುವುದು, ಮೂರನೇ ಯುನಿಟ್ ದಲ್ಲಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಲು ಕ್ರಮ‌ವಹಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಅಧಿಕಾರ ಸ್ವೀಕಾರವಲ್ಲ ಸವಾಲಿನ ಕೆಲಸ.‌ಪಟ್ಟಣದ ಅಭಿವೃದ್ಧಿ ಜವಾಬ್ದಾರಿ ದೊಡ್ಡದು ಇದನ್ನು ನಿರ್ವಹಿಸಬೇಕು.ನೆನಗುದಿಗೆ ಬಿದ್ದ ಕಾಮಗಾರಿ ಮಾಡಬೇಕು.‌ಅಭಿವೃದ್ಧಿ ವಿಷಯದಲ್ಲಿ ಕೆಲವೊಂದು ಕಷ್ಟ ಅನುಭವಿಸಬೇಕಾಗುತ್ತದೆ.
ಅನೇಕ ವರ್ಷಗಳ ಬಾಂಧವ್ಯ ಬಿಟ್ಟು ಚದುರಿಹೋದ ಸಂತ್ರಸ್ತರ ಜೀವನವಾಗಿದೆ.ಸಂತ್ರಸ್ತರ ಕೆಲಸ ತೀವ್ರಗತಿಯಲ್ಲಿ ಆಗಬೇಕು ಎಂದರು.

ಅನುಭವಿ ಕನ್ನಡ ರಚಿಸಿಕೊಳ್ಳಿ,‌ಸಿವಿಲ್ ಕೆಲಸದಲ್ಲಿ ಜ್ಞಾನ ಹೊಂದಿದವರು ತಂಡ ಮಾಡಿ‌ಅಭಿವೃದ್ದಿ ಮಾಡುವ ಮೂಲಕ ಜನತೆಗೆ ಉತ್ತಮ ಆಡಳಿತ ನೀಡಬೇಕು ಎಂದರು. ಮೇಟಿಯವರು 40 ವರ್ಷದಿಂದ‌ಅವರೊಂದಿಗೆ ಬಂದಿದ್ದೇವೆ. ಅವರು ನನ್ನನ್ನು ಅವರು ಸೋಲಿಸಿದರು ನಾವು ಅವರ ಸೋಲಿಸಿದರು.ಯಾವುದೇ ಕಾರ್ಯ ಕರ್ತರ ಜಗಳ ಇರಲಿಲ್ಲ ನಮ್ಮ‌ಮಧ್ಯೆ ಬರಲಿಲ್ಲ.ಅವರೊಬ್ಬ ಅಜಾತ ಶತ್ರು, ಎಲ್ಲರೊಂದಿಗೆ ಬೆರೆತು ಕೆಲಸ‌ಮಾಡುತ್ತಾರೆ ಎಂದು ಬಣ್ಣಿಸಿದರು.

ಜಿಲ್ಲಾಧಿಕಾರಿ ಕೆ.ಎಂ.ಜಾಣಕಿ ಮಾತನಾಡಿ, 6 ತಿಂಗಳಿಂದ‌ ಸಾರ್ವಜನಿಕ ಹಾಗೂ ರೈತರ ಸಮಸ್ಯೆ ಬಹಳ‌ಇದೆ. ಈಗ ಅಧ್ಯಕ್ಷರಾಗಿ ? ಮೇಟಿ‌ ಅವರು ಅಧಿಕಾರ‌ ವಹಿಸಿಕೊಂಡಿದ್ಸು ಪಟ್ಟಣ ಜ‌ನರ ಸಮಸ್ಯೆ ಪರಿಹಾರ ಕಾಣಲಿವೆ ಎಂದರು. ಮಾಜಿ‌‌ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ಮುಳಗಡೆ ಪ್ರದೇಶ ಬಾಗಲಕೋಟೆ ಆಗಿರುವುದರಿಂದ ಇಲ್ಲಿ ಸಮಸ್ಯೆ ಬಹಳ ಇವೆ.‌ ಕಾನೂನು‌ ಹಾಗೂ ಮಾನವೀಯ ದೃಷ್ಟಿಯಿಂದ ಸಮಸ್ಯೆ ನೋಡಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಮುಳಗಡೆ ಆದವರಿಗೆ ಪರಿಹಾರ ಕೊಟ್ಟರೆ ಸಾಲದು. ಮುಳಗಡೆ ನಂತರ‌ ಒಬ್ಬರು ಒಂದೊಂದು ದಿಕ್ಕಿಗೆ ಹೋಗುತ್ತಾರೆ.‌ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಕೆಲಸ ಆಗಬೇಕು ಎಂದು ಹೇಳಿದರು. ಸಿಇಓ‌ ಶಶಿಧರ ಕುರೇರ ಮಾತನಾಡಿ, ಮೇಟಿಯವರ ಹಿರಿತನ, ಶಾಸಕ, ಸಷಿವರಾಗಿ ಕೆಲಸ ಮಾಡಿದ ಅನುಭವ ಇದೆ.‌ಸಂತ್ರಸ್ತರ‌ಹಾಗೂ ರೈತರ ಕೂಗಿಗೆ ಸ್ಪಂದಿಸುವ ಕೆಲಸ ಮಾಡಲಿದ್ದಾರೆ ಎಂದರು.

ಎಸ್ಪಿ ‌ಅಮರನಾಥ ರೆಡ್ಡಿ, ಆಲಮಟ್ಟಿ ಕೆಬಿಜೆ ಎನ್ ಎಲ್ ಎಂಡಿ ಶ್ರೀನಿವಾಸ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಿಟಿಡಿಎ ಸಿಇ ಮನ್ಮಥಯ್ಯಸ್ವಾಮಿ, 1643ಎಕರೆ ಜಾಗದಲ್ಲಿ ಮೂರನೇ ಯುನಿಟ್ ಅಭಿವೃದ್ಧಿ ಯಾಗಲಿದೆ ಎಂದು ಹೇಳಿದರು. ಎಸಿ ಶ್ವೇತಾ ಬೀಡ್ಕರ, ಹೆಚ್ಚುವರಿ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!