ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಗುರುಪೂರ್ಣಿಮೆ ಹುಣ್ಣಿಮೆ, ಇದೇ ದಿನದಂದು ಜುಲೈ ಬಕ್ ಮೂನ್ ಗೋಚರವಾಗಲಿದೆ.
ಇದನ್ನು ಥಂಡರ್ ಮೂನ್ ಅಂತಲೂ ಕರೆಯುತ್ತಾರೆ. ಇಂದು ಬೆಳಗ್ಗೆ ಬಕ್ ಮೂನ್ ಆರಂಭವಾಗಲಿದೆ. ಬಕ್ ಮೂನ್ ಎಂದರೆ ಜಿಂಕೆಯ ಹಣೆಯ ಮೇಲೆ ಹೊರಹೊಮ್ಮುವ ಕೊಂಬುಗಳನ್ನು ಇದು ಸೂಚಿಸುತ್ತದೆ. ಈ ಸಮಯದಲ್ಲಿ ಜಿಂಕೆಯ ಕೊಂಬುಗಳು ವೇಗವಾಗಿ ಬೆಳೆಯುತ್ತವೆ ಎನ್ನಲಾಗುತ್ತದೆ.
ಅಮೆರಿಕನ್ಸ್ ಈ ಚಂದ್ರನನ್ನು ಥಂಡರ್ ಮೂನ್, ಸಾಲ್ಮನ್ ಮೂನ್ ಎಂದು ಕರೆಯುತ್ತಾರೆ, ಈ ಫುಲ್ ಮೂನ್ ಶೇ.90ರಷ್ಟು ಭೂಮಿಗೆ ಹತ್ತಿರವಾಗಿರುವ ಸಂದರ್ಭದಲ್ಲಿ ಗೋಚರವಾಗುತ್ತದೆ.