Budget | ಮಾಲ್ಡೀವ್ಸ್‌, ಬಾಂಗ್ಲಾ, ಭೂತನ್‌ ರಾಷ್ಟ್ರಗಳಿಗೆ ಸಹಾಯ: ಬಜೆಟ್ ನಲ್ಲಿ ಅನುದಾನ ಮೀಸಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರ ತನ್ನ ಬಜೆಟ್ ನಲ್ಲಿ ಬಾಂಗ್ಲಾದೇಶ (Bangladesh), ಮಾಲ್ಡೀವ್ಸ್‌ಗೆ (Maldives) ಅನುದಾನ ನೀಡುವುದನ್ನು ಮುಂದುವರಿಸಿದೆ.

ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬ ನೀತಿಯನ್ನು ಅಳವಡಿಸಿರುವ ಭಾರತ ತನ್ನ ಬಜೆಟ್‌ನಲ್ಲಿ ನೆರೆಯ ದೇಶಗಳಿಗೆ ಪ್ರತಿ ವರ್ಷ ಅನುದಾನವನ್ನು ನೀಡುತ್ತಾ ಬಂದಿದೆ.

ಭೂತನ್‌ ಗೆ 2025-26ರ ಬಜೆಟ್‌ನಲ್ಲಿ 2,150 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷದ ಅನುದಾನಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ಬಾರಿ 2,543 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.

ಮಾಲ್ಡೀವ್ಸ್‌ಗೆ ಅನುದಾನ ಏರಿಕೆಯಾಗಿದೆ. ಕಳೆದ ಬಾರಿ 470 ಕೋಟಿ ರೂ. ನೀಡಿದ್ದರೆ ಈ ಬಾರಿ 600 ಕೋಟಿ ರೂ. ನೀಡಲಾಗಿದೆ.

ಅಫ್ಘಾನಿಸ್ತಾನಕ್ಕೆ ನೀಡುವ ಅನುದಾನ ಡಬಲ್‌ ಆಗಿದೆ. ಕಳೆದ ಬಾರಿ 50 ಕೋಟಿ ರೂ. ನೀಡಿದ್ದರೆ ಈ ಬಾರಿ 100 ಕೋಟಿ ರೂ.ಗೆ ಏರಿಕೆಯಾಗಿದೆ. 2 ವರ್ಷದ ಹಿಂದೆ 207 ಕೋಟಿ ರೂ. ಅನುದಾನ ನೀಡಲಾಗಿತ್ತು.

ಮ್ಯಾನ್ಮರ್‌ಗೆ ಕಳೆದ ಬಾರಿ 400 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 350 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಬಾಂಗ್ಲಾ ಸರ್ಕಾರದ ಜೊತೆ ಭಿನ್ನಮತ ಇದ್ದರೂ ಬಜೆಟ್‌ನಲ್ಲಿ ಅನುದಾನ ನಿಲ್ಲಿಸಿಲ್ಲ. ಬಾಂಗ್ಲಾದೇಶಕ್ಕೆ 120 ಕೋಟಿ ರೂ. ನೇಪಾಳ 700 ಕೋಟಿ ರೂ., ಶ್ರೀಲಂಕಾಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಇರಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಬಹಾರ್‌ ಬಂದರು ಕಾಮಗಾರಿಗೆ ಕಳೆದ ವರ್ಷದಂತೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಆಫ್ರಿಕಾದ ದೇಶಗಳಿಗೆ ಕಳೆದ ವರ್ಷ 200 ಕೋಟಿ ರೂ. ನೀಡಲಾಗಿತ್ತು. ಈ ಬಜೆಟ್‌ನಲ್ಲಿ 225 ಕೋಟಿ ರೂ.ಗೆ ಏರಿಕೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!